ಆಜ್ರಿ: ಯಾವುದೇ ಪರವಾನಿಗೆ ಇಲ್ಲದೇ ಕೋವಿಯನ್ನು ಹೊಂದಿದ್ದ ಆಜ್ರಿ ಗ್ರಾಮದ ಹೆದ್ದಾರಿಜೆಡ್ಡು ನಿವಾಸಿ ವಿ.ಜೆ. ಜೊನ್ಸನ್ನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, ಕೋವಿಯನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಪೊಲೀಶರು ಆರೋಪಿಯ ಮನೆಗೆ ಪ್ರವೇಶಿಸಿದಾಗ ಆತ ಕೋವಿಯನ್ನು ಹಿಡಿದುಕೊಂಡು ಸ್ವಚ್ಚಗೊಳಿಸುತ್ತಿದ್ದನು. ಪರವಾನಿಗೆ ಇಲ್ಲದೇ ಹೊಂದಿರುವುದಾಗಿ ಒಪ್ಪಿಕೊಂಡ ಆರೋಪಿಯನ್ನು ಬಂಧಿಸಿ, ಕೋವಿಯನ್ನು ಪಂಚರ ಸಮ್ಮುಖದಲ್ಲಿ ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.