ಅಕ್ರಮ ಗೋ ಸಾಗಟ ವಾಹನ ಅಪಘಾತ 10 ಗೋವುಗಳ ರಕ್ಷಣೆ

ಕೋಟ : ಅಕ್ರಮವಾಗಿ ಗೋ ಸಾಗಟ ಮಾಡುತ್ತಿದ್ದ ಪಿಕ್‌ ಆಪ್‌ ವಾಹನವೊಂದು ಹಿಂಬದಿಯ ಚಕ್ರ ತುಂಡರಿಸಿ ಅಪಘಾತಕಿದಾದ ಘಟನೆ ಸಾಸ್ತಾನ ಸಮೀಪದ ಚೇಂಪಿಯಲ್ಲಿ ನಡೆದಿದೆ.

ಮಂಗಳವಾರ ಬೆಳಗಿನ ಜಾವ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅಕ್ರಮವಾಗಿ 10 ಹೋರಿ ಕರುಗಳನ್ನ ಪಿಕ್‌ ಅಪ್‌ ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಚಾಲಕ ಹಾಗೂ ನಿರ್ವಾಹಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ .

ಅಪಘಾತದಿಂದ ಬದುಕಿದ ಬಡ ಜೀವಗಳು : ಅಪಘಾತ ಸಂಭವಿಸಿದ್ದರಿಂದ ಕಾಸಯಿಖಾನೆ ಸೇರಿ ಸಾವನ್ನಪ್ಪ ಬೇಕಾಗಿದ್ದ 10 ಗೋವುಗಳು ತಮ್ಮ ಜೀವ ಉಳಿಸಿಕೊಂಡಿವೆ.

ಅಮಾನವೀಯ ರೀತಿಯಲ್ಲಿ ಸಾಗಟ : ಪಿಕ್‌ ಅಪ್‌ ವಾಹನದಲ್ಲಿ ಮೂರು-ನಾಲ್ಕು ಗೋವುಗಳನ್ನ ಮಾತ್ರ ಸಾಗಿಸಲು ಸಾದ್ಯ, ಆದರೆ ಇಲ್ಲಿ ಹತ್ತು ಗೋವುಗಳನ್ನ ಕಾಲು ಕಟ್ಟಿ ಅಮಾನವೀಯವಾಗಿ ತುಂಬಲಾಗಿತ್ತು .

ಸಾರ್ವಜನಿಕರು ಪೋಲಿಸರ ಮಾನವೀಯ ಕಾರ್ಯಚರಣೆ : ಘಟನೆ ಕುರಿತು ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಬೇಟಿ ನೀಡಿದ ಕೋಟ ಪೊಲೀಸ್‌ ಠಾಣಾಧಿಧಿಕಾರಿ ಕೆ.ಆರ್‌.ನಾಯ್ಕ ನೇತƒತ್ವದ ಪೊಲೀಸ್‌ ಸಿಬ್ಬಂದಿಗಳು ಹಾಗೂ ನೂರಾರು ಸಂಖ್ಯೆಯ ಸಾರ್ವಜನಿಕರು ಗೋವುಗಳನ್ನ ವಾಹನದಿಂದ ಕೆಳಗಿಳಿಸಿ, ಕಾಲಿಗೆ ಕಟ್ಟಿದ ಹಗ್ಗವನ್ನ ಬಿಚ್ಚಿ ಮಾನವೀಯ ರಕ್ಷಣಾ ಕಾರ್ಯ ನೆಡೆಸಿದರು.

ಸ್ಥಳಿಯರ ಅಕ್ರೋಶ : ಈ ರೀತಿಯ ಅಕ್ರಮ ಗೋ ಸಾಗಟ ಅಕ್ಷಮ್ಯವಾಗಿದ್ದು ಇಂತಹ ಪೈಶಾಚಿಕ ಕೃತ್ಯವೆಸಗಿದವರನ್ನ ಹಿಡಿದು ಸೂಕ್ತ ಶಿಕ್ಷೆ ವಿಧಿಸಬೇಕು ಹಾಗೂ ಗೋವುಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
Udayavani | Oct 01, 2013

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com