ಬಳ್ಕೂರು: ಗ್ರಾಮದ ಬಿ.ಎಚ್.ಕ್ರಾಸ್ ರಸ್ತೆಯ ಬಳಿ ರಾತ್ರಿ 1 ಗಂಟೆ ಹೊತ್ತಿಗೆ ದಾವಣಗೆರೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದೆ.
ಗಾಯಗೊಂಡವರನ್ನು ಹಾಸನ ಸಾಲಿಗಾಮೆ ಹೋಬಳಿಯ ಹೊಸಹಳ್ಳಿಯ ಪ್ರವೀಣ್ (24), ಕೃಷ್ಣಮೂರ್ತಿ (30), ಜಾನ್ಡೇಸಾ (45), ಕುಮಾರ್ ನಾಯ್ಕ (65), ಬಶೀರ್ ಸಾಬ್ (30), ನಿಜಾಮ್ ಅಹಮ್ಮದ್ (27), ಹನುಮಂತಪ್ಪ (59), ಮಜಾಯಿದ್ದಿನ್ (23), ಆಂಜನೇಯ (38), ಪದ್ಮನಾಭ (55) ಹಾಗೂ ಲಕ್ಷ್ಮಿನಾರಾಯಣ (43) ಎಂದು ಗುರುತಿಸಲಾಗಿದೆ. ಗಾಯಾಳುಗಳು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ಸು ರಸ್ತೆಯ ತೀರಾ ಎಡಕ್ಕೆ ಚಲಿಸಿದ್ದರಿಂದ ಬಸ್ಸು ಮಗುಚಿದೆ. ಪ್ರಯಾಣಿಕ ಪ್ರವೀಣ್ ದೂರಿನನ್ವಯ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.