ಕಾರು ಢಿಕ್ಕಿ -ಬೈಕ್‌ ಸವಾರ ಸಾವು

ಕುಂದಾಪುರ : ಬಿದ್ಕಲ್‌ಕಟ್ಟೆ -ಹುಣ್ಸೆಮಕ್ಕಿ ಮಾರ್ಗದ ಗುಡ್ಡೆಯಂಗಡಿ ಬಳಿ ಕಾರು ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ ಸವಾರ ಕೊರವಡಿಯ ನಿವಾಸಿ ಭೋಜ (32) ಅವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
    ಮೂಲತಃ ಉಳ್ಳೂರು-74 ನಿವಾಸಿಯಾದ ಮೃತರು ಕೆಲಸ ಮುಗಿಸಿಕೊಂಡು ತೆಕ್ಕಟ್ಟೆ ಬಳಿಯ ಕೊರವಡಿಯ ಹರಪ್ಪನಕೆರೆಯ ತನ್ನ ಪತ್ನಿಯ ಮನೆಗೆ ಆಕ್ಟಿವ್‌ ಹೋಂಡಾದಲ್ಲಿ ಹೋಗುತ್ತಿರುವಾಗ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಭೋಜ ಅವರು ಸೆಂಟ್ರಿಂಗ್‌ ಕೆಲಸವನ್ನು ಮಾಡಿಕೊಂಡಿದ್ದು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com