ನಗರದಲ್ಲಿ ಸರಣಿ ಅಪಘಾತ ಬಸ್ಸುಗಳ ನಡುವೆ ಢಿಕ್ಕಿ: ಬೈಕ್‌ ಸವಾರ ಗಂಭೀರ

ಕುಂದಾಪುರ: ನಗರದ ಪುರಸಭೆ ರಸ್ತೆಯಲ್ಲಿ ಬಸ್ಸುಗಳ ನಡುವೆ ನಡೆದ ಢಿಕ್ಕಿಯಲ್ಲಿ ಸುಮಾರು ಒಂಭತ್ತು ಮಂದಿ ಗಾಯಗೊಂಡಿರುವುದಲ್ಲದೇ ಬಸ್ಸುಗಳ ನಡುವೆ ಸಾಗುತ್ತಿದ್ದ ಬೈಕ್‌ ಸವಾರ ಬಸ್ಸು ಹಿಂದಿನಿಂದ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಗಾಯಾಳು ಬೈಕ್‌ ಸವಾರರನ್ನು ಹುಣ್ಸೆಮಕ್ಕಿಯ ಅಧ್ಯಾಪಕ ನೂಜಾಡಿ ನಾಗರಾಜ ಶೆಟ್ಟಿ ಎಂದು ಗುರುತಿಸಲಾಗಿದೆ.

ಕುಂದಾಪುರ ಹೊಸ ಬಸ್ಸು ನಿಲ್ದಾಣದಿಂದ ಖಾಸಗಿ ಎಕ್ಸಪ್ರಸ್‌ ಬಸ್ಸು ಉಡುಪಿಯತ್ತ ಸಾಗುತ್ತಿತ್ತು. ಈ ಬಸ್ಸಿನ ಹಿಂದುಗಡೆಯಿಂದ ನೂಜಾಡಿ ನಿವಾಸಿ ನಾಗರಾಜ ಶೆಟ್ಟಿ ಅವರು ಬೈಕ್‌ನಲ್ಲಿ ಮನೆಯತ್ತ ಸಾಗುತ್ತಿದ್ದರು. ಖಾಸಗಿ ಎಕ್ಸಪ್ರಸ್‌ ಬಸ್ಸು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಭರದಲ್ಲಿ ಅಕಸ್ಮಿಕವಾಗಿ ಬಸ್ಸನ್ನು ನಿಲ್ಲಿಸುವ ವೇಳೆಯಲ್ಲಿ ಬಸ್ಸಿನ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಲೋಕಲ್‌ ಬಸ್ಸು ಬೈಕ್‌ ಬಸ್ಸಿಗೆ ಢಿಕ್ಕಿಹೊಡೆಯಿತ್ತಲ್ಲದೇ ನೇರವಾಗಿ ಎಕ್ಸಪ್ರಸ್‌ಗೆ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ರಸ್ತೆಯ ಎಡಬದಿಗೆ ಬೈಕ್‌ ಸಹಿತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡರು. ಇದರಿಂದಾಗಿ ಹಿಂದಿನಿಂದ ಬಸ್ಸಿನಿಂದ ತಪ್ಪಿಸಿಕೊಂಡು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಖಾಸಗಿ ಲೋಕಲ್‌ ಬಸ್ಸಿನಲ್ಲಿದ್ದ ಸುಮಾರು ಒಂಭತ್ತು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಹಕ್ಲಾಡಿಯ ಶ್ರೀಕರ (18), ನೂಜಾಡಿಯ ನಿವಾಸಿಗಳಾದ ರವಿಕಲಾ (18), ಶ್ವೇತಾ (16), ಗೋಪಾಲ (26), ಶಾರದಾ (31), ಸಂಜೀವ (36), ಸವಿತಾ (23), ವಿನಯ ದೇವಾಡಿಗ (25) ಎಂದು ಗುರುತಿಸಲಾಗಿದೆ.

ಲೋಕಲ್‌ ಬಸ್ಸು ಕುಂದಾಪುರದಿಂದ ನೂಜಾಡಿಗೆ ಸಾಗುತ್ತಿದ್ದು , ಬಸ್ಸಿನಲ್ಲಿ ನೂಜಾಡಿ- ಹಕ್ಲಾಡಿ ಪರಿಸರದ ಶಾಲಾ ಮಕ್ಕಳು ಹಾಗೂ ಜನರು ಪ್ರಯಾಣಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡ ಬೈಕ್‌ ಸವಾರ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಗಾಯಗೊಂಡವರನ್ನು ಎರಡು ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com