ತ್ರಾಸಿ: ಇಲ್ಲಿನ ಪ್ರವಾಸಿ ಮಂದಿರದ ಬಳಿ ಸೋಮವಾರ ಬೆಳಗ್ಗೆ ಸ್ವಿಪ್ಟ್ ಡಿಸೆ„ರ್ ಕಾರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಉ.ಕ.ಜಿಲ್ಲೆಯ ಹೊನ್ನಾವರದ ಕಾಸರಕೋಡು ನಿವಾಸಿ ಮೊಹಮ್ಮದ್ ಸಾಲಿಹ (50) ಹಾಗೂ ಅವರ ಸ್ನೇಹಿತ ಝೈನುದ್ದೀನ್ ಎಂದು ಗುರುತಿಸಲಾಗಿದೆ. ಅವರು ಕಾರಿನಲ್ಲಿ ಉಡುಪಿಯತ್ತ ಹೋಗುತ್ತಿರುವಾಗ ಮಂಗಳೂರಿನಿಂದ ಅಥಣಿ ಕಡೆಗೆ ಸಾಗುತ್ತಿದ್ದ ಬಸ್ಸು ಢಿಕ್ಕಿ ಹೊಡೆದಿತ್ತು.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.