ಕುಂದಾಪುರ: ಸಿದ್ದಾಪುರ ಗ್ರಾಮದ ಮತ್ತಿಬೇರು ನಿವಾಸಿ ಶಂಕರ ಪೂಜಾರಿ (40) ತೋಟದಲ್ಲಿ ಮರವನ್ನು ಹತ್ತಿ ಸೊಪ್ಪು ಕಡಿಯುತ್ತಿರುವಾಗ ಹೆಜ್ಜೇನು ಕಡಿದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅ.15ರಂದು ಶಂಕರ ಪೂಜಾರಿ ಅವರು ಅಡಿಕೆ ತೋಟಕ್ಕೆ ಸೊಪ್ಪು ಮಣ್ಣು ಮಾಡುವ ಉದ್ಧೇಶದಿಂದ ಮನೆಯ ಹತ್ತಿರದ ತೋಟದ ಪಕ್ಕದಲ್ಲರುವ ಮರವನ್ನು ಹತ್ತಿ ಸೊಪ್ಪು ಕಡಿಯುತ್ತಿರುವ ಸಂದರ್ಭದಲ್ಲಿ ಹೆಜ್ಜೆàನುಗಳು ಕಚ್ಚಿ ಗಾಯಗೊಂಡಿದ್ದರು. ಅವರನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಗೆ ದಾಖಲಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಅ.24ರಂದು ಮೃತಪಟ್ಟಿರುತ್ತಾರೆ. ಕೃಷಿಕರಾಗಿವ ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.