ಬೈಂದೂರು: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವುದನ್ನು ಸ್ಥಳೀಯರು ತಡೆದ ಪರಿಣಾಮ ಎರಡು ಗುಂಪುಗಳ ನಡುವೆ ಪರಸ್ಪರ ಘರ್ಷಣೆ ನಡೆದ ಘಟನೆ ಹೇರೂರು ಗ್ರಾಮದ ಕೆಂಚಿ ಭೀಮನಪಾರೆ ಬಳಿ ನಡೆದಿದೆ.
ರವಿವಾರ ರಾತ್ರಿ ಎರಡು ವಾಹನಗಳಲ್ಲಿ ಗೋವುಗಳನ್ನು ಸಾಗಿಸುತಿದ್ದ ಕಂಬದ ಕೋಣೆ ಗ್ರಾಮದ ಹಳಗೇರಿ ನಿವಾಸಿಗಳಾದ ರಿಜ್ವಾನ್, ಮನ್ಸೂರ್ ಹಾಗೂ ಗಂಗೊಳ್ಳಿಯ ಸಮೀಮುಲ್ಲಾ, ಜುನೈದ ಸೇರಿದಂತೆ 7 ಜನರನ್ನು ಅಡ್ಡಗಟ್ಟಿದ ಸ್ಥಳೀಯರು ವಾಹನ ಸಮೇತ ಪೋಲಿಸರಿಗೊಪ್ಪಿಸಿದ್ದಾರೆ. ಈ ಸಂಧರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ರಿಜ್ವಾನ್, ಮನ್ಸೂರ್, ಸಮೀಮುಲ್ಲಾ ಗಾಯಗೊಂಡಿದ್ದಾರೆ.ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರತಿದೂರು ದಾಖಲು: ಈ ನಡುವೆ ಗೋಸಾಗಾಟ ನಡೆಸುವವರು ಪ್ರತಿದೂರು ನೀಡಿದ್ದಾರೆ. ಹೇರೂರು ಗ್ರಾಮದ ಪುಟ್ಟಣ್ಣ ಅವರಿಂದ ಜಾನುವಾರುಗಳನ್ನು ಖರೀದಿಸಿ ಗಂಗೊಳ್ಳಿಗೆ ಸಾಗಿಸುತ್ತಿ¨ªೇವೆ. ಹೇರೂರು ಸಮೀಪದ ಕೆಂಜಿ ಎಂಬಲ್ಲಿ ಗುಂಡ, ಸುರೇಂದ್ರ, ಮಂಜು, ಶಿವರಾಯ, ಬೋಜ, ರಾಘು, ಮಂಜುನಾಥ, ಮಂಜು ಮಸ್ಕಿ, ವೆಂಕಟು, ಭಾಸ್ಕರ, ರಾಜು ನಾಯ್ಕ, ಶೇಖರ ಸೇರಿದಂತೆ 14 ಜನರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ವಾಹನವನ್ನು ಜಖಂ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.ಎಂದು ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಿ.ಟಿ. ಪಾಟೀಲ್, ವೃತ್ತ ನಿರೀಕ್ಷಕ ಸದಾಶಿವ, ಠಾಣಾಧಿಕಾರಿ ಸುನಿಲ್ಕುಮಾರ, ಗಂಗೊಳ್ಳಿ ಠಾಣಾಧಿಕಾರಿ ಸಂಪತ್ಕುಮಾರ ಭೇಟಿ ನೀಡಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani | Oct 07, 2013