ಜಾನುವಾರು ವಶ: ಉದ್ವಿಗ್ನ

ಕುಂದಾಪುರ: ಕೋಮು ಸೂಕ್ಷ್ಮ ಪ್ರದೇಶ ಕಂಡ್ಲೂರಿನ ಧೂಪದಕಟ್ಟೆ ಸಮೀಪ ಮುಸ್ಲಿಂ ಮನೆಯೊಂದರ ಅಂಗಳದಲ್ಲಿ ಕಟ್ಟಿ ಹಾಕಲಾಗಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡ ಪ್ರಕರಣ ಗೊಂದಲ ಸೃಷ್ಟಿಸಿದ್ದು, ಭಾನುವಾರ ಕೆಲ ಸಮಯ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯಿತು. 

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು ಅಂಗಳದಲ್ಲಿ ಕಟ್ಟಿ ಹಾಕಿದ್ದ 7 ಗೋವುಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಪರಿಸರದ ಯುವಕರು ಪೊಲೀಸರ ಕ್ರಮ ಖಂಡಿಸಿದ್ದು, ಈ ಸಂದರ್ಭ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಗುಮಾನಿ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಹಲ್ಲೆಗೆ ಯತ್ನ ನಡೆದಿದ್ದರಿಂದ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ತಕ್ಷಣ ಕ್ರಮ ಕೈಗೊಂಡ ಪೊಲೀಸರು ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಮುಂದುವರಿಸಲಾಗಿದೆ. 

ಜಾನುವಾರು ಹಸ್ತಾಂತರ: ಪೊಲೀಸರು ವಶಪಡಿಸಿಕೊಂಡ 5 ಗಂಡು ಕರು ಹಾಗೂ ಎರಡು ಹಸುಗಳನ್ನು ವಾರೀಸುದಾರರಿಗೆ ಸಂಜೆ ವೇಳೆ ಪೊಲೀಸರು ಹಸ್ತಾಂತರಿಸಿದ್ದಾರೆ. ವಶಪಡಿಸಿಕೊಂಡ ಗೋವುಗಳನ್ನು ಈ ಮೊದಲು ಗೋಶಾಲೆಗೆ ರವಾನಿಸಲಾಗಿತ್ತು. ಗೋವುಗಳ ವಾರೀಸುದಾರಿಕೆ ಬಗ್ಗೆ ಸಂಬಂಧಪಟ್ಟವರು ಸೂಕ್ತ ದಾಖಲೆ, ವಿವರ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಗೋವುಗಳನ್ನು ಸಂಬಂಧಿತರಿಗೆ ನೀಡಿದ್ದಾರೆ.

ವಿಕ ಸುದ್ದಿಲೋಕ | Oct 6, 2013,
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com