ಅಪಘಾತದಲ್ಲಿ ಯುವ ಪತ್ರಕರ್ತ ಸಾವು

ಕುಂದಾಪುರ: ವಕ್ವಾಡಿ ಬಸ್ ತಂಗುದಾಣ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದು ಪರಿಣಾಮ ಅಪಘಾತದಲ್ಲಿ ಯುವ ಪತ್ರಕರ್ತ ವಿಷ್ಣು ಶೆಟ್ಟಿಗಾರ್(30) ಸಾವಿಗೀಡಾಗಿದ್ದಾರೆ. 
       ಸ್ನೇಹಿತನ ಹೀರೊ ಹೋಂಡಾ ಬೆಕ್ ತೆಗೆದುಕೊಂಡು ಕೋಟೇಶ್ವರಕ್ಕೆ ಹೋಗಿ ಬರುವುದಾಗಿ ಹೇಳಿ ಅವರು ಹೊರಟಿದ್ದು, ವಕ್ವಾಡಿ ಸಮೀಪ ಖಾಸಗಿ ಬಸ್ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೆಕ್‌ಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮತಪಟ್ಟಿದ್ದಾರೆ. ಬಸ್ ಬೆಕ್‌ಗೆ ಡಿಕ್ಕಿ ಹೊಡೆದು ಸುಮಾರು 200 ಮೀ. ದೂರಕ್ಕೆ ಎಳೆದುಕೊಂಡು ಹೋಗಿತ್ತು. ಅವಿವಾಹಿತರಾಗಿದ್ದ ಅವರು ಸ್ಥಳೀಯ ಪತ್ರಿಕೆಯ ಪ್ರಸರಣಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com