ಬೈಂದೂರು: ಕಿರಿಮಂಜೇಶ್ವರ ಗ್ರಾಮದ ಸರಕಾರಿ ಆಸ್ಪತ್ರೆಯ ಬಳಿ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಕ್ರೂಸರ್ ವಾಹನ ಭಾಗಶಃ ಜಖಂಗೊಂಡ ಘಟನೆ ಸಂಭವಿಸಿದೆ.
ಮುಡೇìಶ್ವರಕ್ಕೆ ಬಾಡಿಗೆಗೆ ತೆರಳಿದ್ದ ಸಿದ್ದಾಪುರದ ಭಾಸ್ಕರ ಶೆಟ್ಟಿ ಅವರ ಕ್ರೂಸರ್ ವಾಹನಕ್ಕೆ ಕುಂದಾಪುರದಿಂದ ಬೈಂದೂರಿನತ್ತ ತೆರಳುತ್ತಿದ್ದ ಲಾರಿಯೊಂದು ಢಿಕ್ಕಿ ಹೊಡೆದಿತ್ತು. ಯಾರಿಗೂ ಅಪಾಯ ಸಂಭವಿಸಿಲ್ಲ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.