ಹೆಮ್ಮಾಡಿ: ಛಾಯಾಗ್ರಾಹಕ, ಶ್ರೀಕೃಷ್ಣ ಸ್ಟುಡಿಯೋ ಮಾಲಕ ಪ್ರದೀಪ್ ಹೆಬ್ಟಾರ್(40) ಸಂತೋಷನಗರದ ನೇಣು ಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಮ್ಮಾಡಿಯ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ ಪ್ರದೀಪ್ ಹೆಬ್ಟಾರ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ತಮ್ಮ ಓರ್ವ ಪುತ್ರಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದುದರಿಂದ ಮಾನಸಿಕವಾಗಿ ನೊಂದಿದ್ದೇ ಪ್ರದೀಪ್ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಕುಂದಾಪುರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.