ಸೈಕಲ್‌ ಖರೀದಿಯ ಸೋಗಿನಲ್ಲಿ ಬಂದು ಪರ್ಸ ಎಗರಾಯಿಸಿದರು

ಕುಂದಾಪುರ: ನಗರದ ಹಳೇ ಬಸ್ಸು ನಿಲ್ದಾಣದ ಬಳಿಯಲ್ಲಿರುವ ಸೈಕಲ್‌ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಯುವಕರಿಬ್ಬರು ಅಂಗಡಿ ಮಾಲಕಿಯ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಿ ಅಲ್ಲಿಯೇ ಕೆಳಗೆ ಇರಿಸಲಾಗಿದ್ದ ಆಕೆಯ ಹಣದ ಪರ್ಸ್‌ನ್ನು ಲಪಟಾಯಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

ಸಂಜೆ ಬೈಕ್‌ನಲ್ಲಿ ಭಾರತ್‌ ಸೈಕಲ್‌ ಸ್ಟೋರ್‌ಗೆ ಬಂದ ಇಬ್ಬರು ಯುವಕರಲ್ಲಿ ಓರ್ವ ಸೈಕಲ್‌ ಖರೀದಿಯನ್ನು ಮಾಡುವ ಕುರಿತು ಮಾಲಕಿಯೊಂದಿಗೆ ಚರ್ಚೆ ನಡೆಸುತ್ತಾ ಅತ್ತ ಗಮನವನ್ನು ಕೇಂದ್ರಿಕರಿಸುವಂತೆ ಮಾಡಿದರೆ ಇನ್ನೋರ್ವ ಕ್ಯಾಶ್‌ ಬಾಕ್ಸ್‌ ಹತ್ತಿರವೇ ಇದ್ದ ಪರ್ಸನ್ನು ಎಗರಿಸಿದ್ದಾನೆ. ನಂತರ ಅಲ್ಲಿಂದ ತೆರಳಿದ ಯುವಕರು ಪರ್ಸನಲ್ಲಿದ್ದ ಹಣವನ್ನು ಮಾತ್ರ ತೆಗೆದು ಪರ್ಸ್‌ನ್ನು ವಾಪಸು ಓರ್ವ ರಿಕ್ಷಾವೊಂದರಲ್ಲಿ ಅದೇ ಅಂಗಡಿಗೆ ತಲುಪಿಸುವಂತೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಅಷ್ಟರ ತನಕ ಪರ್ಸ್‌ ತೆಗೆದುಕೊಂಡು ಹೋದ ಬಗ್ಗೆ ತಿಳಿಯದ ಮಹಿಳೆ ಪರ್ಸ್‌ ವಾಪಾಸು ಕೊಟ್ಟಾಗಲೇ ಕಳವಿನ ಅರಿವಾದದ್ದು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com