ಪತ್ನಿಗೆ ಕಿರುಕುಳ: ಪೊಲೀಸು ಸಿಬ್ಬಂದಿಗೆ ಜಾಮೀನು

ಕುಂದಾಪುರ: ಯುವತಿಯ ಪ್ರೇಮಪಾಶಕ್ಕೆ ಒಳಗಾಗಿ ಪತ್ನಿಗೆ ವೈವಾಹಿಕ ಹಿಂಸೆ ನೀಡಿದ ಆರೋಪವನ್ನು ಹೊತ್ತು ಬ್ರಹ್ಮಾವರ ಪೊಲೀಸರಿಂದ ಬಂಧಿಸಲ್ಪಟ್ಟ ಅಮಾಸೆಬೈಲು ಆರಕ್ಷಕ ಠಾಣೆಯ ಸಿಬ್ಬಂದಿ ಸತೀಶನಿಗೆ ಉಡುಪಿಯ ಜೆ.ಎಂ.ಎಫ್‌.ಸಿ. ನ್ಯಾಯಾಲಯವು ಶರ್ತಬದ್ಧ ಜಾಮೀನು ನೀಡಿದೆ.

2004ರಲ್ಲಿ ರೇಶ್ಮಾ ಎನ್ನುವವಳನ್ನು ವರಿಸಿದ ಪೊಲೀಸ್‌ ಸಿಬ್ಬಂದಿ 2011ರ ತನಕ ಪತ್ನಿಯೊಂದಿಗೆ ಸರಿಯಾಗಿ ವೈವಾಹಿಕ ಜೀವನ ನಡೆಸಿದ್ದು, ನಂತರ ಯುವತಿಯೋರ್ವಳ ಜೊತೆ ಪ್ರೇಮಾಂಕುರವಾಗಿ ಪತ್ನಿಗೇ ಹಿಂಸೆ ಹಾಗೂ ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದಾನೆಂದು ಪತ್ನಿಯು ದೂರನ್ನು ನೀಡಿದ್ದರು. ಪ್ರಕರಣ ದಾಖಲಾದ ನಂತರ ಪರಾರಿಯಾಗಿದ್ದ ಆರೋಪಿ ಸತೀಶನನ್ನು ಬ್ರಹ್ಮಾವರ ಪೊಲೀಸರು ಚಾಣಾಕ್ಷತನದಿಂದ ಬಂಧಿಸಿದ್ದರು.

ಆರೋಪಿ ಪೊಲೀಸ್‌ ಸಿಬ್ಬಂದಿ ಸತೀಶನ ಜಾಮೀನು ಕೋರಿ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುಡೇìಶ್ವರ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com