ಕಾರು-ಬೈಕ್ ಡಿಕ್ಕಿ: ಯುವ ಉದ್ಯಮಿ ಸಾವು

ತೆಕ್ಕಟ್ಟೆ : ಇಲ್ಲಿನ ರಾ.ಹೆ 66ರಲ್ಲಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ಎದುರು ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಯುವ ಉದ್ಯಮಿ ಅಶ್ವಥ್‌ ( 30) ಅವರು ಸಾವನ್ನಪ್ಪಿದ ಘಟನೆ ಸೆ.27 ರಂದು ಬೆಳಗ್ಗೆ ಸಂಭವಿಸಿದೆ.

ಈತ ತೆಕ್ಕಟ್ಟೆ ಕರಿಕಲ್‌ಕಟ್ಟೆ ಹೆಬ್ಟಾರ್‌ ಕಾಲನಿಯ ನಿವಾಸಿ ಎಲ್‌ಐಸಿ ಹೌಸಿಂಗ್‌ ಫೈನಾನ್‌ನ ನಿವೃತ್ತ ಮೆನೇಜರ್‌ ಮಂಜುನಾಥ ಮಧ್ಯಸ್ಥ ಅವರ ಪುತ್ರನಾಗಿರುತ್ತಾನೆ.

ಘಟನೆ : ವಕ್ವಾಡಿ ಹೆಗ್ಗರ್‌ಬೈಲ್‌ನಲ್ಲಿ ಸ್ವಸ್ತಿಕ್‌ ಹೋಲೋ ಬ್ಲಾಕ್‌ ಉದ್ಯಮ ನಡೆಸುತ್ತಿರುವ ಅಶ್ವಥ್‌ ಎಂದಿನಂತೆ ಕರಿಕಲ್‌ಕಟ್ಟೆ ಹೆಬ್ಟಾರ್‌ ಕಾಲನಿಯ ತನ್ನ ನಿವಾಸದಿಂದ ವಕ್ವಾಡಿಗೆ ತನ್ನ ಎನ್‌ಫಿಲ್ಡ್‌ ಬೈಕ್‌ನಲ್ಲಿ ತೆರಳುತ್ತಿದ್ದಾಗ ತೆಕ್ಕಟ್ಟೆಯಿಂದ ಕೋಟದ ಕಡೆಗೆ ವಿರುದ್ಧ ದಿಕ್ಕಿನಿಂದ ಬಂದ ಟಾಟಾ ನ್ಯಾನೋ ಕಾರು ಏಕಾಏಕಿ ಢಿಕ್ಕಿ ಹೊಡೆದ ಪರಿಣಾಮ ಅಶ್ವಥ್‌ ಬೈಕ್‌ನಿಂದ ಆಯತಪ್ಪಿ ರಸ್ತೆ ಬಿದ್ದರು.

ಅದೇ ವೇಳೆ ಹಿಂದಿನಿಂದ ಬಂದ ಈಚರ್‌ ವ್ಯಾನ್‌ ಮೈ ಮೇಲೆ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಾಗ ಅಲ್ಲಿಂದ ಆಸ್ಪತ್ರೆಗೆ ಸಾಗಿಸಿದರಾದರೂ ಕೂಡಾ ಮಾರ್ಗದ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಗೆ ನ್ಯಾನೋ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದ್ದು ಮುಂಭಾಗದ ಟಯರ್‌ ಪಂಚರ್‌ ಆಗಿದೆ .

ಮೃತರು ತಾಯಿ ಶಾರದಾ , ಪತ್ನಿ ಸುಮಂಗಲ ಒಂದುವರೆ ವರ್ಷದ ಪುತ್ರಿ ಹಾಗು ಸಹೋದರಿಯನ್ನು ಅಗಲಿದ್ದಾರೆ.

ಅರೆಬರೆ ರಸ್ತೆ ಕಾಮಗಾರಿ ಪರಿಣಾಮ : ರಾ.ಹೆ 66 ಚತುಷ್ಪಥ ಅರೆಬರೆ ಕಾಮಗಾರಿಯ ಪರಿಣಾಮ ಏಕಮುಖ ಸಂಚಾರ ಮಾಡುವ ಈ ಮಾರ್ಗದಲ್ಲಿ ವಿರುದ್ಧ ದಿಕ್ಕಿನಿಂದ ವಾಹನಗಳು ಚಲಿಸುವ ಪರಿಣಾಮವಾಗಿ ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಹಾಯಕ್ಕೆ ಬಂದ ಗ್ಯಾರೇಜ್‌ ಮಾಲೀಕ : ಅಪಘಾತ ಸಂಭವಿಸಿ ರಕ್ತದ ಮಡುವಿನಲ್ಲಿ ಜೀವನ ಮರಣದ ನಡುವೆ ಹೋರಾಡುತ್ತಿದ್ದ ಅಶ್ವಥ ಅಮ್ಮಾ ಎಂದು ಆಕ್ರಂದಿಸಿ ನೀರು ಬೇಕು ಎಂದಾಗಲೂ ಎಲ್ಲರೂ ನೆರೆದಿದ್ದ ಮಂದಿ ಮೂಖ ವಿಸ್ಮಯರಾಗಿ ನೋಡುತ್ತಾ ನಿಂತಿದ್ದರು ಎನ್ನಲಾಗಿದೆ ಅಲ್ಲಿಯೇ ಸಮೀಪದಲ್ಲಿರುವ ಗ್ಯಾರೇಜ್‌ ಮಾಲೀಕ ಲೋಕೇಶ್‌ ಬಂದು ಮಾನವೀಯ ಸ್ಪಂದನ ನೀಡುವ ಮೂಲಕ ತಕ್ಷಣವೇ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಿದರು ಆದರೆ ಮಾರ್ಗದ ಮಧ್ಯದಲ್ಲಿ ಅಶ್ವಥ್‌ ಕೊನೆಯದಾಗಿ ಹೇಳಿದ ಮಾತು ಮಾತ್ರ ನನ್ನ ಜೀವ ಉಳಿಸಿ ! ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com