ಮೀನು ಮಾರುಕಟ್ಟೆ ಬಳಿ ತಲವಾರಿನಲ್ಲಿ ಹಲ್ಲೆ: ಪೊಲೀಸರಿಂದ ತನಿಖೆ

ಕುಂದಾಪುರ: ನಗರದ ಮೀನು ಮಾರುಕಟ್ಟೆ ರಸ್ತೆಯ ಬಳಿ ಸೋಮವಾರ ರಾತ್ರಿ ಕುಂದಾಪುರದ ಉದ್ಯಮಿ ಜಯಚಂದ್ರ ಅವರ ಮೇಲೆ ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಪೊಲೀಸ‌ರು ತನಿಖೆ ಆರಂಭಿಸಿದ್ದಾರೆ.
        ಘಟನೆ‌ಗೆ ಸಂಬಂಧಿಸಿದಂತೆ ಗಾಯಾಳು ಜಯಚಂದ್ರ ಅವರ ಸಹೋದರ ವಿನಯಚಂದ್ರ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದು, ರೋಹನ್‌, ರಾಜೇಂದ್ರ, ಸುನಿಲ್‌, ಪ್ರದೀಪ್‌, ವಿಕ್ಕಿ ಹಾಗೂ ಸುಭಾಶ್‌ ಅವರುಗಳು ಪೂರ್ವದ್ವೇಷದಿಂದ ತಲವಾರಿನಿಂದ ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
       ತಲವಾರು ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್‌ ಇಲಾಖೆ ಈ ಪ್ರಕರಣದ ಪೂರ್ವಾಪರದ ಬಗ್ಗೆ ತನಿಖೆಗೆ ಮುಂದಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಕಠಿಣ ಕ್ರಮವನ್ನು ತೆಗೆದುಕೊಂಡ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂದàಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ವದಂತಿಗಳಿದ್ದರೂ ಪೊಲೀಸ್‌ ಮೂಲಗಳು ಅದನ್ನು ಧೃಢೀಕರಿಸುತ್ತಿಲ್ಲ.
      ಗಾಯಾಳು ಜಯಚಂದ್ರ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com