ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಮಲ್ಯಾಡಿ ಮಾರ್ಗದಲ್ಲಿ ರುವ ಸಾಹಿತ್ಯ ಮೊಬೈಲ್ ಅಂಗಡಿಯಲ್ಲಿ ಸೆ.4 ರಂದು ಮಧ್ಯಾಹ್ನ ಗಂಟೆ 2 ಗಂಟೆಯ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ನೂಟ್ ಆಗಿ ಅಪಾರ ಹಾನಿಯಾದ ಘಟನೆ ಸಂಭವಿಸಿದೆ.
ಸಂತೋಷ್ ಕೊರವಡಿ ಹಾಗೂ ರಾಮದಾಸ್ ಪಾಲುದಾರಿಕೆಯ ಸಾಹಿತ್ಯ ಮೊಬೈಲ್ನಲ್ಲಿ ಎಂದಿನಂತೆ ಮಧ್ಯಾಹ್ನ ಅಂಗಡಿಯ ಬಾಗಿಲು ಹಾಕಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ ಕಂಪ್ಯೂಟರ್ ಯುಪಿಎಸ್ನಲ್ಲಿ ಶಾರ್ಟ್ ಸರ್ಕ್ನೂಟ್ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ ಎಂದು ಅಂಗಡಿಯ ಮುಖ್ಯ ಕಾರ್ಯನಿರ್ವಾಹಕ ಚಂದ್ರ ಕೊಮೆ ತಿಳಿಸಿದ್ದಾರೆ.
ಈ ಘಟನೆಯ ತೀವ್ರತೆಗೆ ಅಂಗಡಿಯಲ್ಲಿನ ಎರಡು ಕಂಪ್ಯೂಟರ್ಗಳು ಹಾಗೂ ಅಪಾರ ಪ್ರಮಾಣದ ಮೊಬೈಲ್ಗಳು ಸುಟ್ಟು ಕರಕಲಾಗಿದ್ದು ಅಂಗಡಿಯ ಮುಂಭಾಗ ಶೋ ಕೇಸ್ ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿಯ ಆಹುತಿಗೆ ಅಂದಾಜು ರೂ 1.50 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ .
ಸಾರ್ವಜನಿಕರ ಸಹಕಾರ: ಮಧ್ಯಾಹ್ನ ಗಂಟೆ 2ರ ಸುಮಾರಿಗೆ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಮೀಪದಲ್ಲಿರುವ ಅಂಗಡಿಯವರ ಸಮಯ ಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರ ಬೆಂಕಿ ಸಂದಿಸುವಲ್ಲಿ ಯಶಸ್ವಿಯಾಯಿತು ಅಲ್ಲದೆ ಸಂಭವನೀಯ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಕೋಟ ಪೋಲಿಸ್ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದಾರೆ.
-ಚಿತ್ರ: ರಾಜೇಶ್ ಆಚಾರ್ಯ ತೆಕ್ಕಟ್ಟೆ