ಕುಂದಾಪುರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಉಡುಪಿ ತಾಲೂಕು ಕೋಟ ಮಣೂರು-ಪಡುಕೆರೆ ನಿವಾಸಿ ಮಂಜು ಶನಿವಾರ ಸಂಜೆ ಸಮುದ್ರಪಾಲಾಗಿದ್ದಾರೆ. ಆಶ್ವಿನಿ ಹೆಸರಿನ ಬೋಟ್ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೀಸಿದ ಗಾಳಿಗೆ ಆಯತಪ್ಪಿ ಅವರು ಸಮುದ್ರಕ್ಕೆ ಬಿದ್ದಿದ್ದು ನಾಪತ್ತೆಯಾಗಿದ್ದಾರೆ. ಸಹವರ್ತಿ ಮೀನುಗಾರರು, ಇತರೆ ಬೋಟ್ ಮೀನುಗಾರರು ಶೋಧ ಮುಂದುವರಿಸಿದ್ದಾರೆ.