ದತ್ತು ಸ್ವೀಕರಿಸಿದ ಬಾಲಕಿಗೆ ಚಿತ್ರಹಿಂಸೆ ಆರೋಪ: ರಕ್ಷಣೆ

ಕುಂದಾಪುರ: ದತ್ತು ಸ್ವೀಕರಿಸಿದ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದರು ಎನ್ನುವ ಆರೋಪದ ಹಿನ್ನಲೆಯಲ್ಲಿ ಕನ್ಯಾನದ ನಮ್ಮಭೂಮಿ ಸಂಸ್ಥೆಯವರು ದಲಿತ ಸಂಘರ್ಷ ಸಮಿತಿಯ ಸದಸ್ಯರ ನೆರವಿನೊಂದಿಗೆ ಬಾಲಕಿಯನ್ನು ಹೆಂಗವಳ್ಳಿಯಿಂದ ರಕ್ಷಿಸಿ ಸೋಮವಾರ ರಾತ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿಯ ತಂದೆ-ತಾಯಿ ಕಳೆದ ವರ್ಷ ನಿಧನರಾದುದರಿಂದ ಅನಾಥ ಲಕ್ಷ್ಮಿಯನ್ನು ಹೆಂಗವಳ್ಳಿಯ ರಾಮಣ್ಣಶೆಟ್ಟಿ ಹಾಗೂ ಶೋಭಾ ಶೆಟ್ಟಿ ಅವರು ದತ್ತು ಸ್ವೀಕರಿಸಿದ್ದರು. ಶೋಭಾ ಶೆಟ್ಟಿ ದಂಪತಿ ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು, ಕೆಲವು ದಿನಗಳ ಹಿಂದೆ ಹೆಂಗವಳ್ಳಿಗೆ ಬಂದಿದ್ದರು. ಈ ಸಮಯದಲ್ಲಿ ಅವರು ಬಾಲಕಿಗೆ ಹಿಂಸೆ ನೀಡುತ್ತಿದ್ದಾರೆ ಎನ್ನುವ ಆರೋಪ ಕಂಡು ಬಂದ ಹಿನ್ನಲೆಯಲ್ಲಿ ನಮ್ಮಭೂಮಿ ಸಂಸ್ಥೆಯವರು ಬಾಲಕಿಯನ್ನು ನಮ್ಮಭೂಮಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com