ಮಣಿಪಾಲದಲ್ಲಿ 4ರ ಬಾಲಕಿಗೆ ಲೈಂಗಿಕ ಕಿರುಕುಳ

ಉಡುಪಿ: ಮೂರು ತಿಂಗಳ ಹಿಂದಷ್ಟೇ ವೈದ್ಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯದಿಂದ ಸುದ್ದಿಯಾದ ಮಣಿಪಾಲದಲ್ಲಿ ಇದೀಗ 4ರ ಪುಟ್ಟ ಬಾಲೆಯ ಲೈಂಗಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. 

ಇಲ್ಲಿನ ಖಾಸಗಿ ಶಾಲೆಯಲ್ಲಿ ನರ್ಸರಿ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಬಸ್ ನಿರ್ವಾಹಕರನ್ನು ಮಣಿಪಾಲ ಪೊಲೀಸರು ಬಂಸಿದ್ದಾರೆ. 

ಬಸ್ ನಿರ್ವಾಹಕರಾದ ಹೆಬ್ರಿ ನಾಡ್ಪಾಲಿನ ಶುಭಕುಮಾರ್ (21) ಮತ್ತು ಮಣಿಪಾಲ ಆದರ್ಶ ನಗರ ಸುೀರ್ (46) ಬಂತರು. ಇವರನ್ನು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಕಾರಿ ಮನೆಗೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸಲಾಗಿದೆ. 

ಘಟನೆ ವಿವರ: ಕಳೆದ ಸೋಮವಾರ ಈ ಘಟನೆ ನಡೆದಿದೆ. ಪ್ರತಿದಿನ ಶಾಲೆಯ ಬಸ್ಸಲ್ಲಿ ಬರುತ್ತಿದ್ದ ಮಗು ಆ ಬಸ್ಸಲ್ಲಿ ಬಾರದೆ ಆಟೋ ರಿಕ್ಷಾದಲ್ಲಿ ಮನೆಗೆ ಬಂದಿದ್ದರಿಂದ ಮನೆಯವರು ಗಾಬರಿಗೊಂಡಿದ್ದಾರೆ. ಮಗುವನ್ನು ವಿಚಾರಿಸಿದಾಗ ಬಸ್ಸಿನಲ್ಲಿಯೇ ಶುಭಕುಮಾರ್ ಮತ್ತು ಸುೀರ್ ಲೈಂಗಿಕ ಕಿರುಕುಳ ನೀಡಿದ್ದು ಬೆಳಕಿಗೆ ಬಂದಿದೆ. ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಈ ಬಗ್ಗೆ ಶನಿವಾರ ದೂರು ದಾಖಲಾಗಿದ್ದು, ಭಾನುವಾರ ಇಬ್ಬರ ಬಂಧನ ನಡೆದಿದೆ. 

ಶಾಲೆಯಲ್ಲಿ 12 ಸ್ಕೂಲ್ ಬಸ್‌ಗಳಿದ್ದು, ಎರಡು ಬಸ್‌ಗಳ ನಿರ್ವಾಹಕರ ಮೇಲೆ ಆರೋಪವಿದೆ. ಆರಂಭದಲ್ಲಿ ಹೆತ್ತವರು ವೌಖಿಕ ದೂರು ನೀಡಿದರೂ ಬಳಿಕ ಪೊಲೀಸರು ಧೈರ್ಯ ತುಂಬಿದ ಬಳಿಕ ಲಿಖಿತ ದೂರು ನೀಡಿದರು. ದೂರು ನೀಡಿದ ವಿಷಯ ತಿಳಿಯುತ್ತಿದ್ದಂತೆಯೇ ಆರೋಪಿಗಳು ನಾಪತ್ತೆಯಾಗಿದ್ದು ಬಳಿಕ ಪೊಲೀಸರು ಅವರನ್ನು ಹುಡುಕಿ ಬಂಸಿದ್ದಾರೆ. 

ಬಸ್ಸಿನವರು ಹೇಳುವ ಕತೆ ಬೇರೆ: ಸಂಜೆ ಎಂದಿನಂತೆ ಶಾಲೆ ಬಿಟ್ಟ ನಂತರ ಮಕ್ಕಳು ಬಸ್ ಹತ್ತಿ ಕುಳಿತುಕೊಳ್ಳುತ್ತಾರೆ. ಅದರಂತೆ ಈ ಮಗೂ ಕುಳಿತಿದೆ. ಆದರೆ ಅವತ್ತು ಬಸ್ ಬದಲಾಗಿದ್ದರಿಂದ ಇನ್ನೊಂದು ಬಸ್‌ಗೆ ಹತ್ತಿ ಕುಳಿತುಕೊಳ್ಳುವಂತೆ ತಿಳಿಸಲಾಗಿತ್ತು. ಮಕ್ಕಳು ಇನ್ನೊಂದು ಬಸ್‌ಗೆ ಹೋಗಿದ್ದರು. ಈ ಮಗು ಈ ಬಸ್‌ನಲ್ಲಿ ಬಾಕಿಯಾಗಿದ್ದು ಗೊತ್ತೇ ಇರಲಿಲ್ಲ. ಬಸ್ ಹೋದರೂ ಮಗು ಬಾರದೆ ಇದ್ದಿದ್ದರಿಂದ ಆ ಮನೆಯವರು ಕರೆ ಮಾಡಿದ್ದಾರೆ. ಆನಂತರ ಮಗುವನ್ನು ಆಟೋ ರಿಕ್ಷಾದಲ್ಲಿ ಕಳುಹಿಸಲಾಗಿದೆ. ಯಾವುದೇ ಲೈಂಗಿಕ ಕಿರುಕುಳ ನಡೆದಿಲ್ಲ ಎನ್ನುವುದು ಶಾಲೆಯ ಇತರ ಬಸ್‌ಗಳ ಸಿಬ್ಬಂದಿ ಸಮಜಾಯಿಷಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com