ಲಾರಿಗಳಿಂದ ಡಿಸೀಲ್‌ ಕಳವು

ಮರವಂತೆ: ಇಲ್ಲಿನ ಬೀಚ್‌ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೂರು ಲಾರಿಗಳಿಂದ ಡಸೀಲ್‌ ಕಳವು ಮಾಡಿದ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನಿಂದ ಗ್ಯಾಸ್‌ ಸಿಲೆಂಡರ್‌ಗಳನ್ನು ತುಂಬಿಸಿಕೊಂಡು ಕಾರವಾರದಲ್ಲಿ ಅನ್‌ಲೋಡ್‌ ಮಾಡಿ ಪುನಃ ಮಂಗಳೂರಿಗೆ ವಾಪಾಸಾಗುತ್ತಿದ್ದ ಎರಡು ಲಾರಿಗಳ ಚಾಲಕರು ನಿದ್ರೆ ಮಾಡಲು ಮರವಂತೆ ಬೀಚ್‌ ಬಳಿ ನಿಲ್ಲಿಸಿದಾಗ ಈ ಘಟನೆ ನಡೆದಿದ್ದು, ಎರಡು ಲಾರಿಗಳಿಂದ ಸುಮಾರು 400ಲೀಟರ್‌ ಹಾಗೂ ಅಲ್ಲಿಯೇ ನಿಲ್ಲಿಸಲಾಗಿದ್ದ ಇನ್ನೊಂದು ಲಾರಿಯಿಂದ 100 ಲೀಟರ್‌ನಷ್ಟು ಡಿಸೀಲ್‌ನ್ನು ಕಳವು ಮಾಡಲಾಗಿರುತ್ತದೆ.

ಲಾರಿಯ ಚಾಲಕ ಕೆಳಗಿಳಿದು ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಲ್ಲಿಂದ ಪರಾರಿಯಾಗಿರುತ್ತಾನೆ. ಈ ಕುರಿತು ಬಂಟ್ವಾಳ ಬಿ.ಸಿ.ರೋಡ್‌ನ‌ ಚಾಲಕ ಅಬ್ಟಾಸ್‌ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com