ಕುಂದಾಪುರ: ನೂಜಾಡಿ ಪ್ರಭಾಕರ ಆಚಾರ್ಯ ಅವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಬು ಪೂಜಾರಿ ಅವರಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶರ್ತಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಆರೋಪಿ ನೂಜಾಡಿ ಬಾಬು ಪೂಜಾರಿಯು ಬಂದೂಕಿನ ಮಾಲಕನಾಗಿರುತ್ತಾನೆ. ನಾಲ್ವರು ಯುವಕರ ಜೊತೆಯಲ್ಲಿ ಮೃತ ಪ್ರಭಾಕರ ಆಚಾರ್ಯ ಆ.10ಂದು ರಾತ್ರಿ 10.30ಕ್ಕೆ ಶಿಕಾರಿಗೆಂದು ಹೋದಾಗ ನಾಡಕೋವಿಯಿಂದ ಸಿಡಿದ ಗುಂಡು ಜೀವ ತೆಗೆದಿತ್ತು. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ಕೊಲ್ಲೂರಿನ ಪೊಲೀಶರು ದಾಖಲಿಸಿಕೊಂಡಿದ್ದಾರೆ. ಪ್ರಭಾಕರ ಆಚಾರ್ಯರ ಮರಣದ ಬಗ್ಗೆ ಹಲವು ಸಂದೇಹಗಳು ಎದ್ದಿದೆ. ನಾಡಕೋವಿಯನ್ನು ಪೊಲೀಶರು ಈಗಾಗಲೇ ವಶಪಡಿಸಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗೆ ಕಳುಹಿಸಿದ್ದಾರೆ. ನೂಜಾಡಿ ಅಮ್ಮನಮಕ್ಕಿ ಬಾಬು ಪೂಜಾರಿಯ ನಿರೀಕ್ಷಣಾ ಜಾಮೀನು ಕೋರಿ ಕುಂದಾಪುರ ನ್ಯಾಯವಾದಿ ರವಿಕಿರಣ ಮುಡೇರ್ಶ್ವರ ವಾದಿಸಿದ್ದರು.