ಕುಂದಾಪುರ: ಯಾವುದೇ ಪರವಾನಿಗೆ ಇಲ್ಲದೇ ಮಾಂಸಕ್ಕಾಗಿ ಅಕ್ರಮವಾಗಿ ಎರಡು ಕೋಣಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಎರಡು ಕೋಣ ಹಾಗೂ ಸಾಗಾಟಕ್ಕೆ ಬಳಸಿದ ವಾಹನ ಸಹಿತವಾಗಿ ಕುಂದಾಪುರ ಪೊಲೀಸರು ರವಿವಾರ ಕುಂದಾಪುರ ಕೋಡಿಯಲ್ಲಿ ಬಂಧಿಸಿದ್ದಾರೆ.
ಆರೋಪಿಗಳನ್ನು ಕೋಡಿ ನಿವಾಸಿ ಮಹಮ್ಮದ್ ಸಮ್ಮದ್(26), ಮತ್ತು ಬಿದ್ಕಲ್ಕಟ್ಟೆಯ ಚಂದ್ರ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಕೋಣಗಳು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಟೆಂಪೋವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕುಂದಾಪುರ ಅಪರಾಧ ವಿಭಾಗದ ಪಿ.ಎಸ್.ಐ. ರೇವತಿ, ಸಹಾಯಕ ಉಪನಿರೀಕ್ಷಕ ಶೀನ ನಾಯ್ಕ, ಸಿಬ್ಬಂದಿಗಳಾದ ರಾಘವೇಂದ್ರ, ರಾಜು, ಅಶೋಕ ಮತ್ತು ಪ್ರಿನ್ಸ್ ಸಹಕರಿಸಿದ್ದರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.