ಬೈಂದೂರು : ಅಕ್ರಮವಾಗಿ ಮರಗಳನ್ನು ಕಡಿದು ಹಾಕಿ ಕೊಡಿಟ್ಟ ಭಟ್ಕಳ ವಲಯದ ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದು ಕೊಡಿಟ್ಟ ಮರದ ತುಂಡುಗಳನ್ನು ವಾಹನದಲ್ಲಿ ತರುತ್ತಿರುವ ಸಂದರ್ಭದಲ್ಲಿ ತೂದಳ್ಳಿ ನಂದರಗದ್ದೆ ಬಳಿ ಆರೋಪಿಗಳಾದ ಕೆ.ಟಿ.ಜೊಸೆಫ್ ಹಾಗೂ ಕೆ.ಟಿ. ಥಾಮಸ್ ಅವರುಗಳು ಹಲ್ಲೆ ನಡೆಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲೆ ಭಟ್ಕಳ ವಲಯದ ಬೆಳ್ಕೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪಾಂಡುರಂಗ ನಾಯ್ಕ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದು ಕೂಡಿಟ್ಟಿರುವುದನ್ನು ಭದ್ರತೆಯ ದೃಷ್ಟಿಯಿಂದ ಅರಣ್ಯ ಪ್ರದೇಶದಿಮದ ಪಿಕ್ಅಪ್ ವಾಹನದಲ್ಲಿ ತೆಗದುಕೊಂಡು ಬರುತ್ತಿದ್ದು, ಅದರ ಹಿಂದೆ ಬೈಕ್ನಲ್ಲಿ ಅರಣ್ಯ ರಕ್ಷಕ ಸುರೇಂದ್ರ ಅವರೊಂದಿಗೆ ಬರುತ್ತಿರುವಾಗ ಆರೋಪಿಗಳು ಬೈದು ಹಲ್ಲೆ ನಡೆಸಿರುತ್ತಾರೆ. ಈ ಸಮಯದಲ್ಲಿ ಪಿಕ್ಅಪ್ ವಾಹನದಲ್ಲಿದ್ದ ಸಿಬ್ಬಂದಿಗಳು ಓಡಿ ಬಂದಾಗ ಆರೋಪಿಗಳು ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿದೂರು:
ಮೂವರು ಅರಣ್ಯ ಇಲಾಖೆಯ ಅಧಿಕಾರಿಗಳಾದ ಜಿ.ವಿ.ನಾಯಕ್, ಎಂ.ಪಿ.ನಾಯಕ್ ಹಾಗೂ ಸುರೇಂದ್ರ ನಾಯಕ್ ಸೇರಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಕೋವಿ ತೋರಿಸಿ ಮನೆಯಲ್ಲಿದ್ದ ವಿನ್ನದ ಸರ ಹಾಗೂ ನಗದನ್ನು ದೋಷಿಕೊಂಡು ಹೋಗಿದ್ದಾರೆ ಎಂದು ಯಡ್ತರೆ ಗ್ರಾಮದ ತೂದಳ್ಳಿ ನಂದರಗದ್ದೆಯ ನಿವಾಸಿ ಚಿನ್ನಮ್ಮ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಮನೆಯ ಸಮೀಪದ ಬಂದು ಪೋಟೋ ತೆಗೆಯುತ್ತಿದ್ದ ಅಧಿಕಾರಿಗಳು ಮನೆಯಲ್ಲಿ ಬೆಲೆಬಾಳುವ ಮರಗಳನ್ನು ದಾಸ್ತಾನು ಇಟ್ಟುಕೊಂಡಿದ್ದಿರಾ ಎಂದು ಹೇಳಿ ಕೋವಿಯನ್ನು ತೋರಿಸಿ ಬೆದರಿಸಿ, ಅಕ್ರಮವಾಗಿ ಮನೆಯ ಒಳಗಡೆ ಪ್ರವೇಶಿಸಿ ತನ್ನನ್ನು ದೂಡಿದ್ದು, ಪ್ರಜ್ಞೆ ತಪ್ಪದ ತಾನು ಎಚ್ಚರವಾಗಿ ನೋಡುವಾಗ ಎರಡು ಪವನ್ ಚಿನ್ನದ ಸರ ಹಾಗೂ 3200 ರೂ.ನಗದನ್ನು ದೋಚಿಕೊಂಡು ಹೋಗಿರುತ್ತಾರೆ ಎಂದು ಚಿನ್ನಮ್ಮ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.