ಕುಂದಾಪುರ: ಭಟ್ಕಳ ಹಾಗೂ ಕುಂದಾಪುರದಲ್ಲಿ ಸ್ಕೂಟಿ ಹಾಗೂ ಬೈಕ್ಗಳನ್ನು ಕಳವು ಮಾಡಿದ ಆರೋಪಿ ಮಂಗಳೂರು ಶಾಂತಿನಗರದ ಚಂದ್ರ ಯಾನೆ ಚಂದ್ರಶೇಖರ ಯಾನೆ ರಮೇಶ್ ಪೂಜಾರಿ (37)ಯನ್ನು ಕುಂದಾಪುರ ಅಪರಾಧ ವಿಭಾಗದ ಪಿಎಸ್ಐ ರೇವತಿ ಅವರು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಮ್ಮಾಡಿಯ ಜಾಲಾಡಿ ಬಳಿ ರಾ.ಹೆ.66ರಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿ ಕಪ್ಪು ಬಣ್ಣದ ಸ್ಕೂಟಿಯನ್ನು ಕಳವು ಮಾಡಿಕೊಂಡು ಕುಂದಾಪುರದತ್ತ ಸಾಗುತ್ತಿದ್ದನು. ಆರೋಪಿಯನ್ನು ಬಂಧಿಸಿ ವಿಚಾರಣೆೆ ನಡೆಸಿದಾಗ ಈತ ಕುಂದಾಪುರ ಕೆ.ಎಸ್.ಆರ್.ಟಿ. ಬಸ್ಸು ನಿಲ್ದಾಣದ ಬಳಿ ಇನ್ನೊಂದು ಬೈಕ್ನ್ನು ಕಳವು ಮಾಡಿದ ಬಗ್ಗೆ ತಿಳಿದು ಬಂದಿರುತ್ತದೆ. ಆ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಅಗಸ್ಟಿನ್ ಕ್ವಾರ್ಡಸ್, ರಾಘವೇಂದ್ರ ಉಪ್ಪೂರು, ಗೋಪಾಲಕೃಷ್ಣ ಪಾಲ್ಗೊಂಡಿದ್ದರು.