ಹಳೇ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಂಧನ

ಸಿದ್ದಾಪುರ: ಹಳೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿದ್ದಾಪುರ ಜನತಾ ಕಾಲೊನಿಯ ನಿವಾಸಿ ಸುರೇಶ ಯಾನೆ ನಜೀರ್‌ ಅವರನ್ನು ಶಂಕರನಾರಾಯಣ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.

2002ನೇ ಇಸವಿಯಲ್ಲಿ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಆಜ್ರಿಹರದಲ್ಲಿ ನಡೆದ ಅಂಗಡಿ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಂಧಿಸಲಾಗಿದ್ದು ನಂತರ ಜಾಮೀನು ಪಡೆದ ಆತ ತಲೆ ಮೆರೆಸಿಕೊಂಡಿದ್ದನು. ಶಂಕರನಾರಾಯಣ ಪೊಲೀಸ್‌ ಉಪ ನಿರೀಕ್ಷಕ ದೇಜಪ್ಪ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಸುರೇಶ್‌ ಕುಮಾರ್‌, ಪ್ರಕಾಶ್‌ ಕಾರ್ಯಾಚರನೆ ನಡೆಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆ ವೆಂಕಟೆಶ್ವರ ಗೇಟ್‌ ಬಳಿ ಬಂಧಿಸಲಾಯಿತು. ಆರೋಪಿಯನ್ನು ಆ.13ರತನಕ ನ್ಯಾಯಾಂಗ ಬಂಧನ ವಿಧಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com