ಮುಂಬಯಿಯಲ್ಲಿ ಗುಂಡೇಟಿಗೆ ಬಲಿಯಾದ ಬೀಜಾಡಿಯ ವಿಜಯ್

ಕುಂದಾಪುರ: ಇಲ್ಲಿನ ಬೀಜಾಡಿ ಗ್ರಾಮದ ಯುವಕ ವಿಜಯ್(32) ಬುಧವಾರ ರಾತ್ರಿ ಮುಂಬಯಿಯ ಬಾಂದ್ರಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ. ಮುಂಬಯಿ ಕಾರ್ಗೊ ಕಂಪನಿಯ ಉದ್ಯೋಗಿಯಾಗಿರುವ ಅವರು ರಾತ್ರಿ 11 ಗಂಟೆ ಸುಮಾರಿಗೆ ಬಾಂದ್ರಾದ ಹೋಟೆಲೊಂದರಲ್ಲಿ ಊಟ ಮಾಡುತ್ತಿದ್ದಾಗ ದುಷ್ಕರ್ಮಿಗಳು ಸನಿಹದಿಂದ ಗುಂಡು ಹೊಡೆದು ಸಾಯಿಸಿದ್ದಾರೆ. 
      ಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಬೀಜಾಡಿಯ ಸಮಾಜಸೇವಕ ಅಶೋಕ ಪೂಜಾರಿಯವರ ಅಕ್ಕನ ಮಗನಾಗಿರುವ ಈತ ಮುಂಬಯಿಯ ಬಾಂದ್ರಾದ ಕಾರ್‌ರೋಡ್ ನಿವಾಸಿಯಾಗಿದ್ದು ಪರಿಸರದಲ್ಲಿ ಸಮಾಜಸೇವೆಯ ಮೂಲಕ ಉತ್ತಮ ಹೆಸರು ಸಂಪಾದಿಸಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com