ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಮಂಕಿಯ ತನ್ನ ಮನೆಯಿಂದ ತಾರಾಪತಿಯ ತಾಯಿ ಮನೆಗೆ ತೆರಳಿದ್ದ ವೇಳೆದ ನಾಪತ್ತೆಯಾಗಿದ್ದ ರಾಘವ ಮೊಗವೀರ (65) ಅವರ ಮೃತದೇಹ ಜು.29ರಂದು ಬೆಳಗ್ಗೆ ಗಂಗೊಳ್ಳಿ ಬಂದರಿನ ಪಶ್ಚಿಮ ಬದಿಯ ಸಮುದ್ರ ದಡದಲ್ಲಿ ಪತ್ತೆಯಾಗಿದೆ.
ರಾಘವ ಮೊಗವೀರ ಅವರು ಜು.26ರಂದು ಮಂಕಿಯ ತನ್ನ ಮಗಳ ಮನೆಯಿಂದ ತಾಯಿ ಮನೆಗೆ ಹೋಗಿದ್ದವರು ಶನಿವಾರದ ತನಕ ಬಾರದೇ ಇದ್ದಾಗ ಅವರ ಪುತ್ರಿ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಸಂಜೆಯ ವೇಳೆಗೆ ಅವರು ತಾರಾಪತಿಯಿಂದ ವಾಪಾಸು ಮಂಕಿಗೆ ವಾಪಸು ಬರುವಾಗ ತಾರಾಪತಿ ಬಳಿಯ ನದಿ ಬದಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ಮುಳುಗಿ ನೆರೆಯ ನೀರಿನಿಂದ ಕೊಚ್ಚಿ ಹೋಗಿ ಸಮುದ್ರ ಸೇರಿ ಅಲೆಗಳಲ್ಲಿ ತೇಲಿಕೊಂಡು ಸಮುದ್ರದ ದಡಸೇರಿರುವುದಾಗಿ ಅವರ ಪುತ್ರಿ ಸುಮತಿ ಮೊಗವೀರ ಗಂಗೊಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.