ಗಂಗೊಳ್ಳಿ: ಇಲ್ಲಿನ ಲೈಟ್ಹೌಸ್ ಬಳಿ ಮೀನುಗಾರಿಕೆ ತೆರಳಿದ್ದ ಮರವಂತೆಯ ಲಕ್ಷ್ಮಣ ಖಾರ್ವಿ (48) ಅವರು ಆಕಸ್ಮಿಕವಾಗಿ ದೋಣಿ ಮಗುಚಿ ಮೃತಪಟ್ಟಿದ್ದಾರೆ.
ಸುಮಾರು ಹನ್ನೊಂದು ಮಂದಿಯೊಂದಿಗೆ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ವಾಪಸು ಬರುತ್ತಿರುವ ವೇಳೆ ಈ ಘಟನೆ ಸಮಭವಿಸಿದೆ. ಕಡಲಿನಲ್ಲಿ ಅಕಸ್ಮಾತ್ ಗಾಳಿಯಿಂದ ಅಲೆಗಳ ತೀವ್ರತೆಗೆ ಸಿಲುಕಿದ ದೋಣಿ ಮಗುಚುವ ಸ್ಥಿತಿ ತಲುಪಿದಾಗ ಲಕ್ಷ್ಮಣ ಖಾರ್ವಿ ಅವರು ಆಯತಪ್ಪಿ ಕಡಲಿಗೆ ಬಿದ್ದಿದ್ದು , ಕೂಡಲೇ ದೋಣಿಯಲ್ಲಿದ್ದ ಇತರರು ನೀರಿನಿಂದ ಮೇಲೆತ್ತಿ ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿರುತ್ತಾರೆ. ಮೃತರು ಪತ್ನಿ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.