ಹೆಮ್ಮಾಡಿ : ದೇವಲ್ಕುಂದ-ಹೆಮ್ಮಾಡಿ ರಾಜ್ಯ ಹೆದ್ದಾರಿಯ ನಡುವಿನ ಕಟ್ಬೇಲೂರು ರೈಲ್ವೇ ಮೇಲ್ಸೇತುವೆಯಲ್ಲಿ ನಿಂತಿದ್ದ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.
ಪಲ್ಸರ್ ಬೆ„ಕ್ನಲ್ಲಿ ನೆಂಪುವಿನತ್ತ ಹೊರಟಿದ್ದ ಬೆ„ಕ್ ಸವಾರರಾದ ಉದಯ ಆನಗಳ್ಳಿ ಮತ್ತು ಶರತ್ ಆನಗಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಿûಾ ಚಾಲಕ ಶ್ರೀನಿವಾಸ ಹಾಗೂ ರಿûಾದಲ್ಲಿ ಪ್ರಯಾಣಿಸುತ್ತಿದ್ದ ಸುಬ್ರಹ್ಮಣ್ಯ, ಪ್ರಕಾಶ್ ಶೆಟ್ಟಿ ಮತ್ತು ಗುರುರಾಜ್ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಗಾಯಗೊಂಡ ಆರೂ ಮಂದಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವಲ್ಕುಂದದಿಂದ ಹೆಮ್ಮಾಡಿಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ರಿûಾ ಇಲ್ಲಿನ ಸೇತುವೆಯಲ್ಲಿ ನಿಂತಿದ್ದ ವೇಳೆ ಘಟನೆ ಸಂಭವಿಸಿದೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕಟ್ಬೇಲೂ¤ರು ರೈಲ್ವೇ ಮೇಲ್ಸೇತುವೆಯು ಸಾಕಷ್ಟು ಎತ್ತರದಲ್ಲಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸೇತುವೆ ಬಳಿ ಸಾಗುವಾಗ ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳನ್ನು ತಕ್ಷಣ ಗುರುತಿಸಲು ಭಾರೀ ಅಡಚಣೆಯಾಗುವಂತೆ ಇರುವುದರಿಂದ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಒಂದು ವಾರದಲ್ಲಿ ಈ ಸೇತುವೆ ಮೇಲೆ ಮೂರು ಅಪಘಾತಗಳು ನಡೆದಿವೆ.