ಚಿನ್ನದ ಬಳೆ ವಂಚನೆ ಪ್ರಕರಣ: ದೂರು

ಸಿದ್ದಾಪುರ: ತಂಗಿ ಮನೆಯಲ್ಲಿ ಇರಿಸಲು ಕೊಟ್ಟಿದ್ದ ಚಿನ್ನಾಭರಣಗಳಲ್ಲಿ ಎರಡು ಬಳೆಗಳನ್ನು ಬದಲಾಯಿಸಿ ರೋಲ್ಡ್‌ಗೋಲ್ಡ್‌ ಬಳೆಗಳನ್ನು ಬದಲಾಯಿಸಿ ವಂಚನೆ ಮಾಡಲಾಗಿದೆ ಎಂದು ಹೊಸೂರು ಗ್ರಾಮ ಕರ್ಜೆಯ ನಿವಾಸಿ ಪ್ರೇಮಲತಾ ಶೆಟ್ಟಿ ಅವರು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದಾರೆ.
     ಪ್ರೇಮಲತಾ ಅವರು ಜು.9ರಂದು ಅಲ್ವಾಡಿ ಗ್ರಾಮದ ಕೊಂಜಾಡಿ ತನ್ನ ತಂಗಿಯ ಮನೆಗೆ ಬಂದಿದ್ದಾಗ ತಾನು ಧರಿಸಿದ್ದ ನಕ್ಲೇಸ್‌, ಎರಡು ಉಂಗುರ ಹಾಗೂ ಎರಡು ಬಳೆಗಳನ್ನು ಇರಿಸಲು ಕೊಟ್ಟಿದ್ದರು. ಅವರು ಅ.4ರಂದು ಮನೆಗೆ ತೆರಳುವಾಗ ವಾಪಾಸು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗುವಾಗ ಎರಡು ಬಳೆಗಳನ್ನು ಬದಲಾಯಿಸಿ ರೋಲ್ಡ್‌ ಗೋಲ್ಡ್‌ ಬಳೆಗಳನ್ನು ನೀಡಿದಾರೆ. ಈ ಎರಡು ಬಳೆಗಳ ಮೌಲ್ಯ ಸುಮಾರು 48 ಸಾವಿರದಾಗಿದೆ. ತಂಗಿ ಹಾಗೂ ತಂಗಿಯ ಗಂಡನ ಹೋರತು ಪಡಿಸಿ, ಅವರ ಮನೆಯಲ್ಲಿರುವ ಇಬ್ಬರ ಮೇಲೆ ಅನುಮಾನ ಇದೆ ಎಂದು ದೂರುದಾರರು ದೂರಿನಲ್ಲಿ ತಿಳಿಸಿದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com