ಗುಂಡೇಟು ಪ್ರಕರಣ: ಪ್ರಭಾಕರ ಸಾವು ಆಕಸ್ಮಿಕವಲ್ಲ; ಕೊಲೆ

ಕುಂದಾಪುರ : ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಮಿತ್ರನ ಬಂದೂಕಿನ ಗುಂಡಿಗೆ ಮೃತಪಟ್ಟ ನೂಜಾಡಿ ನಿವಾಸಿ ಪ್ರಭಾಕರ ಆಚಾರ್ಯ ಅವರ ಸಾವು ಕೊಲೆ ಎಂದು ಕಂದಾಪುರ ಪೊಲೀಸರು ದೃಢಪಡಿಸಿದ್ದಾರೆ.

ಹತ್ಯೆಗೆ ಸಂಬಂಧಪಟ್ಟ ಆರೋಪಿಗಳಾದ ನೂಜಾಡಿಯ ಸುಂದರ ಪೂಜಾರಿ, ನಾಗರಾಜ ಯಾನೆ ರಾಜು ಪೂಜಾರಿ, ಸಂತೋಷ ಪೂಜಾರಿ ಹಾಗೂ ನಾಗರಾಜ ಪೂಜಾರಿ ಅವರನ್ನು ಕೊಲ್ಲೂರು ಪೊಲೀಸರು ಆ. 12ರ ಸಂಜೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ಅ24ರವರೆಗೆ ನ್ಯಾಯಂಗ ಬಂಧನ ವಿಧಿಸಿದೆ.

ನೂಜಾಡಿಯ ನಿವಾಸಿಗಳಾದ ನಾಗರಾಜ ಪೂಜಾರಿ, ಸುಂದರ ಪೂಜಾರಿ, ಸಂತೋಷ ಪೂಜಾರಿ, ರಾಜು ಪೂಜಾರಿ ಇವರುಗಳು ಪ್ರಭಾಕರ ಅವರನ್ನು ಅ.10ರಂದು ಭೇಟೆಯಾಡಲು ಎಂದು ಉಪಾಯದಿಂದ ಕರೆದುಕೊಂಡು ಹೋಗಿ ಕೊಲೆಗೈದರು ಎಂಬುದಾಗಿ ಪ್ರಭಾಕರ ಸಹೋದರ ಪ್ರಕರಣವನ್ನು ದಾಖಲಿಸಿದ್ದರು.

ಪ್ರಭಾಕರನನ್ನು ಕೊಲೆ ಮಾಡಿದ್ದರು ಸಹ ಅದು ಆಕಸ್ಮಿಕವಾಗಿ ನಡೆದ ಗುಂಡಿನ ದಾಳಿ ಎಂದು ನಾಲ್ಕು ಜನ ಆರೋಪಿಗಳು ಕತೆ ಕಟ್ಟಿದ್ದರು. ಇದನ್ನು ಅನುಮಾನಸ್ಪದವಾಗಿಯೇ ಪಡೆದ ಪೊಲೀಸ್‌ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆಕಸ್ಮಿಕ ಸಾವಲ್ಲ ಕೊಲೆ ಎಂದು ದೃಢಪಡಿಸಿದ್ದಾರೆ.

ಪ್ರಭಾಕರ ಹತ್ಯೆ ಬಳಸಿದ ಬಂದುಕು ನಾಗರಾಜ ಪೂಜಾರಿಯ ತಂದೆ ಬಾಬು ಪೂಜಾರಿಯವರ ಮನೆಯಲ್ಲಿ ದೊರೆತಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com