ಕುಂದಾಪುರ: ಹಳ್ನಾಡು ಗ್ರಾಮದ ಸರ್ವೆನಂಬ್ರ 83-1ರಲ್ಲಿ ಗೋಡೆಯನ್ನು ಕೆಡವಿ 30 ಲೋಡ್ ಮಣ್ಣು ಹಾಗೂ ಎರಡು ಮರಗಳನ್ನು ಕಳವು ಮಾಡಿಕೊಂಡು ಹೋಗಲಾಗಿದೆ ಎಂದು ಹಳ್ನಾಡು ಗ್ರಾಮದ ನರೇಶ್ ಶೆಟ್ಟಿ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ತನ್ನ ಸಹೋದರಿಗೆ ಸಂಬಂಧಿಸಿದ ಜಾಗದಲ್ಲಿ ಜೆಸಿಬಿ ಹಾಗೂ ಟಿಪ್ಪರ್ಗಳನ್ನು ಬಳಸಿ ಮಣ್ಣು ಹಾಗೂ ಮರಗಳನ್ನು ಕೊಂಡೊಯ್ಯಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.