ಗಾಳಿ ಮಳೆ: ಶಾಲೆಗೆ ಹಾನಿ

ಕುಂದಾಪುರ: ವಿಪರೀತ ಸುರಿದ ಗಾಳಿ ಮಳೆಗೆ ಕಾಲ್ತೋಡು ಗ್ರಾಮದ ಚಪ್ಪರಿಗೆ ಸರಕಾರಿ ಹಿ.ಪ್ರಾ.ಶಾಲೆಯ ಛಾವಣೆಯ ಹೆಂಚುಗಳು ಹಾರಿಹೋಗಿದ್ದಲ್ಲದೆ, ಗೋಡೆ ಕುಸಿದು ಅಪಾರ ಹಾನಿ ಸಂಭವಿಸಿದ ಘಟನೆ ಮಂಗಳವಾರ ಸಂಭವಿಸಿದೆ.
     ಶಾಲೆಯ ಗೋಡೆಗಳು ಕುಸಿದಿದ್ದು ಸುಮಾರು 3 ಲಕ್ಷ ರೂ.ನಷ್ಟು ಹಾನಿ ಸಂಭವಿಸಿದೆ. ಶಾಲೆಗೆ ರಜೆ ನೀಡಲಾಗಿದೆ.
ಘಟನೆಯ ಸ್ಥಳಕ್ಕೆ ಜಿ.ಪಂ. ಸದಸ್ಯೆ ಸುಪ್ರೀತಾ ದೀಪಕ್‌ಕುಮಾರ್‌ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ವಿಜಯ ಕುಮಾರ್‌ ಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಭೇಟಿ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com