ಚರ್ಚ್‌ ಕಳವು ಆರೋಪಿಗಳಿಗೆ ಜಾಮೀನು

ಕುಂದಾಪುರ: ಗಂಗೊಳ್ಳಿ ಪೊಲೀಸ್‌ ಠಾಣಾವ್ಯಾಪ್ತಿಯ ನಾಡಾ-ಪಡುಕೋಣೆ ಚರ್ಚ್‌ನಲ್ಲಿ ನಡೆದ ಕಳವು ಮಾಡಿದ ಆರೋಪಕ್ಕೆ ಒಳಗಾದ ಇಬ್ಬರು ಆರೋಪಿಗಳಿಗೆ ಕುಂದಾಪುರ ಎ.ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

    ಸುಮಾರು 24 ಸಾವಿರ ರೂ. ಮೌಲ್ಯದ ಧ್ವನಿವರ್ಧಕ ಹಾಗೂ ಅಂಪ್ಲಿಪೈಯರ್‌ ಗಳನ್ನು ಚರ್ಚ್‌ನಿಂದ ಕಳವು ಮಾಡಿದ ನಾಡ ಚುಂಗಿಗುಡ್ಡೆಯ ವಿನುತ್‌ ಶೆಟ್ಟಿ ಮತ್ತು ಸಂಸಾಡಿಯ ರಾಘವೇಂದ್ರ ಮೊಗವೀರ ಇವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಬ್ಬರ ಜಾಮೀನು ಕೋರಿ ನ್ಯಾಯವಾದಿ ರವಿಕುಮಾರ್‌ ಗಂಗೊಳ್ಳಿ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com