ವರದಕ್ಷಿಣೆ ಪೀಡನೆ ಕೇಸು - ಅತ್ತೆಯ ದೋಷ ಮುಕ್ತಿ

ಕುಂದಾಪುರ: ತಾಲೂಕಿನ ಮರವಂತೆ ಗ್ರಾಮದ ಜ್ಯೋತಿ ಎಂಬ ಮಹಿಳೆಗೆ ವೈವಾಹಿಕ ಹಾಗೂ ವರದಕ್ಷಿಣೆ ಹಿಂಸೆ ನೀಡಿದ ಆರೋಪವನ್ನು ಎದುರಿಸುತ್ತಿದ್ದ ಆಕೆಯ ಅತ್ತೆ ಕುಂದಾಪುರ ಕೋಡಿಯ ನಿವಾಸಿ ಪಾರ್ವತಿಯನ್ನು ಕುಂದಾಪುರ ನ್ಯಾಯಾಲಯವು ದೋಷಮುಕ್ತಿಗೊಳಿಸಿದೆ. ಆರೋಪಿಯ ಪುತ್ರ ವಸಂತ ಕೃಷ್ಣನ ವಿವಾಹವು 2000ನೇ ಇಸವಿ ಎಪ್ರಿಲ್‌ 27ರಂದು ನಡೆದಿದ್ದು, ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ. ವರದಕ್ಷಿಣೆಯಾಗಿ 2.75 ಲಕ್ಷ ರೂ. ಪಡೆದ ಆರೋಪಿ ನಂತರ ಹೆಚ್ಚಿನ ವರದಕ್ಷಿಣೆ ಕೋರಿ ಹಿಂಸೆ ನೀಡಿದ್ದಳು ಎಂದು ಆರೋಪಿಸಿದ್ದರು. ದೂರುದಾರರ ಪತಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದಾಗ ಆರೋಪಿಯು ಬೆದರಿಕೆ ಹಾಕಿ ಮನೆಗೆ ಪ್ರವೇಶ ನಿರಾಕರಿಸಿದ್ದಳು ಎನ್ನಲಾಗಿತ್ತು. ಕುಂದಾಪುರದ ಅಂದಿನ ಆರಕ್ಷಕ ವೃತ್ತ ನಿರೀಕ್ಷಕ ವೆಲೈಂಟಿನ್‌ ಡಿ ಸೋಜಾ ಆರೋಪಿಯ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕಟರಣದ ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿಯ ವಿರುದ್ಧ ಮಾಡಲಾದ ಆರೋಪಗಳು ರುಜುವಾತಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅತ್ತೆಯ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್‌ ಮುಡೇìಶ್ವರ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com