ಕುಂದಾಪುರ: ತಾಲೂಕು ಜಡ್ಕಲ್ ಗ್ರಾಮದ ಹಾಲ್ಕಲ್ ಬಳಿ ಕಟ್ಟಿಯಾನಿ ಮನೆಯಲ್ಲಿ ವಾಸವಾಗಿದ್ದ 22ರ ಹರಯದ ಯುವತಿಯನ್ನು ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಕುಂದಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.
2011ರ ಜನವರಿಯಲ್ಲಿ ಶ್ರೀಜಿತ್ ಜೋನ್ ಹಾಗೂ ಸುಜಿತ್ ಜೋನ್ ಯುವತಿಯ ಮನೆಗೆ ನುಗ್ಗಿ ಬೆದರಿಸಿ ಅತ್ಯಾಚಾರ ಮಾಡಿದ್ದಲ್ಲದೇ ಬೆದರಿಕೆ ಹಾಕಿ ನಿರಂತರ ಅತ್ಯಾಚಾರಗೈಯುತ್ತಿದ್ದು, ಆರೋಪಿಗಳ ಅತ್ಯಾಚಾರದಿಂದ 2011ರ ನವಂಬರ್ನಲ್ಲಿ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ನಂತರವೂ ಆರೋಪಿಗಳು ಆಕೆಯನ್ನು ಹಾಗೂ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಅವರ ಬೆದರಿಕೆಗೆ ಹೆದರಿ ಜಡ್ಕಲ್ನಿಂದ ಪರ್ಕಳಕ್ಕೆ ಬಂದು ವಾಸಿಸಲು ಆರಂಭಿಸಿದ್ದರು. ಆರೋಪಿ ಶ್ರೀಜಿತ್ ಜೋನ್ ಅನೇಕ ಅಪರಾಧಗಳಲ್ಲಿ ಆರೋಪಿಯಾಗಿರುವುದರಿಂದ ಬೆದರಿ ಯುವತಿ ದೂರು ಕೊಡಲು ಹೆದರಿದ್ದರು. ಆರೋಪಿಗಳು ಪುನಃ ಯುವತಿಯ ಇರುವಿಕೆಯನ್ನು ತಿಳಿದು ಬೆದರಿಕೆ ಹಾಕಿದ್ದಲ್ಲದೇ ದೂರುದಾರರ ತಂದೆ-ತಾಯಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ಬೇರೊಂದು ಪ್ರಕರಣದಲ್ಲಿ ಶ್ರೀಜಿತ್ ಜೋನ್ ಜೈಲಿನಲ್ಲಿರುವುದರಿಂದ ದೈರ್ಯಗೊಂಡ ಯುವತಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಚಾರದ ದೂರು ನೀಡಿದ್ದಳು. ಪ್ರಕರಣ ದಾಖಲಿಸಿದ ಕೊಲ್ಲೂರು ಪೊಲೀಸರು ಆರೋಪಿಗಳಾದ ಶ್ರೀಜಿತ್ ಜೋನ್ ಹಾಗೂ ಸುಜಿತ್ ಜೋನ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು. ಉಳಿದ ಆರೋಪಿಗಳಾದ ನಿಮ್ಮಿ, ಸಲೋಮಿ ಹಾಗೂ ಶಿವಕುಮಾರ್ ತಲೆಮೆರೆಸಿಕೊಂಡಿದ್ದು, ಆರೋಪಿಗಳಾದ ಶ್ರೀಜಿತ್ ಜೋನ್ಗೆ ಶರ್ತಬದ್ಧ ಜಾಮೀನು ಹಾಗೂ ಉಳಿದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆರೋಪಿಗಳ ಜಾಮೀನು ಅರ್ಜಿ ಕೋರಿ ಕುಂದಾಪುರದ ನ್ಯಾಯವಾದಿಗಳಾದ ಎಸ್.ಜೆ.ಸೆಬಾಸ್ಟಿನ್, ಆತ್ಮಾನಂದ ಶೆಟ್ಟಿ, ಪ್ರವೀಣ್ ಶೇಟ್ ವಾದಿಸಿದ್ದರು