ಕುಂದಾಪುರ: ಕನ್ಯಾನ ಗ್ರಾಮದ ನಮ್ಮಭೂಮಿಯ ತರಬೇತಿ ಕೇಂದ್ರಕ್ಕೆ ಕಳುಹಿಸಲ್ಪಟ್ಟ ವಾಸಿಮ್ (13) ಎಂಬ ಬಾಲಕ ಕಾಣೆಯಾಗಿದ್ದಾನೆ. ಈತ ಉಡುಪಿ ಮಕ್ಕಳ ಸಮಿತಿಯಿಂದ ಜೂ.15ರಂದು ನಮ್ಮಭೂಮಿಗೆ ಬಂದಿದ್ದು, ಅ.18ರಂದು ಕಾಣೆಯಾಗಿದ್ದಾನೆ. ಈತ ಸಿಮೆಂಟು ಬಣ್ಣದ ಟೀಶರ್ಟ ಧರಿಸಿದ್ದು, ಕನ್ನಡ ಬಲ್ಲವನಾಗಿರುತ್ತಾನೆ. ಅಲ್ಲದೇ ಕಪ್ಪು ಬಣ್ಣದ ಪ್ಯಾಂಟ್ಧರಿಸಿದ್ದನು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ಮಾಹಿತಿ ಸಿಕ್ಕವರು ಕುಂದಾಪುರ ಠಾಣೆಯಲ್ಲಿ (08254-230338)ಸಂಪರ್ಕಿಸಲು ಕೋರಲಾಗಿದೆ.