ಕುಂದಾಪುರ: ಕಿರಿಮಂಜೇಶ್ವರ ಮಸ್ಕಿ ಬಳಿ ಮಾರುತಿ ಆಮ್ನಿ ಹಾಗೂ ರಿಡ್ಜ್ ಕಾರಿನ ನಡುವೆ ನಡೆದ ಢಿಕ್ಕಿಯಲ್ಲಿ ಮಾರುತಿ ಆಮ್ನಿಯಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮರವಂತೆಯಿಂದ ಕಾರ್ಯಕ್ರಮಕ್ಕೆಂದು ಮಾರುತಿ ಆಮ್ನಿಯಲ್ಲಿ ಶಿರೂರಿಗೆ ತೆರಳುತ್ತಿದ್ದ ಒಂದೇ ಕುಟುಂಬದ ರಾಮಖಾರ್ವಿ (68) , ಅವರ ಪತ್ನಿ ಮರವಂತೆ ಗ್ರಾ.ಪಂ.ಸದಸ್ಯೆ ಲಕ್ಷ್ಮಿ ಖಾರ್ವಿ (58), ಪುತ್ರ ಶ್ರೀಧರ (34), ಜನಾರ್ಧನ (31) ಹಾಗೂ ಮೊಮ್ಮಗ ಪ್ರಜ್ವಲ್ (14) ಗಾಯಗೊಂಡವರಾಗಿರುತ್ತಾರೆ.
ಢಿಕ್ಕಿ ಹೊಡೆದ ರಿಡ್ಜ್ ಕಾರು ಮುಡೇìಶ್ವರದಿಂದ ಉಡುಪಿಗೆ ತೆರಳುತ್ತಿತ್ತು ಎನ್ನಲಾಗಿದೆ. ಗಾಯಗೊಂಡವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಮ್ನಿ ಕಾರಿನಲ್ಲಿ ಒಂದೇ ಕುಟುಂಬದವರು ಕಾರ್ಯಕ್ರಮಕ್ಕಾಗಿ ಶಿರೂರಿಗೆ ತೆರಳುತ್ತಿದ್ದು ಚಾಲಕ ಸಿರಾಜ್ ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.