ಬೈಕ್‌ ಸ್ಕಿಡ್‌:: ಶಿಕ್ಷಕ ಸಂಜೀವ ನಾಗೂರು ಸಾವು

ಬೈಂದೂರು: ಕುಂದಾಪುರ-ಬೈಂದೂರು ರಾ,ಹೆ 66ರ ಬಿಜೂರು ಜಂಕ್ಷನ್‌ ಬಳಿ ಸೋಮವಾರ ರಾತ್ರಿ 10ರ ಸುಮಾರಿಗೆ ಬೈಕ್‌  ಆಯತಪ್ಪಿ ಮಗುಚಿ ಬಿದ್ದ ಪರಿಣಾಮ, ಬೈಕ್‌ ಸವಾರ ಸವಾರ ತಗ್ಗರ್ಸೆ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ನಂದುಮನೆ ನಿವಾಸಿ ಸಂಜೀವ ನಾಗೂರು (46) ಅವರು ಗಂಭೀರವಾಗಿ ಗಾಯಗೊಂಡು ಮೃತ ಪಟ್ಟಿದ್ದಾರೆ.
     ಸಂಜೀವ ಅವರು ಬೈಂದೂರಿನಿಂದ ಕಿರಿಮಂಜೇಶ್ವರ ಕಡೆಗೆ ಬೆ„ಕ್‌ನಲ್ಲಿ ಹೋಗುತ್ತಿದ್ದಾಗ ಬಿಜೂರು ಜಂಕ್ಷನ್‌ನಲ್ಲಿ ಬೆ„ಕ್‌ ಆಯತಪ್ಪಿ ಮಗುಚಿ ಬಿದ್ದ ಪರಿಣಾಮ ತಲೆ ನೆಲಕ್ಕೆ ಬಡಿಯಿತು. ಗಂಭೀರಗಾಯಗೊಂಡ ಅವರನ್ನು ಸ್ಥಳೀಯರ ಸಹಕಾರದಿಂದ ಕುಂದಾಪುರದ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದರು.

ಮೃತರು ಕಳೆದ 20 ವರ್ಷದಿಂದ ಹಳಗೇರಿ, ಕುಂಜಿಬೆಟ್ಟು, ಬಡಾಕೇರಿ ಸೇರಿದಂತೆ ಬೆ„ಂದೂರು ವಲಯದ ಹಲವು ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 5 ವರ್ಷದಿಂದ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಭಡ್ತಿ ಪಡೆದು ಸೇವೆ ಸಲ್ಲಿಸುತ್ತಿದ್ದರು.

ಮಕ್ಕಳೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿರುವ ಅವರು ಮಕ್ಕಳ ಊರವರ ನೆಚ್ಚಿನ ಶಿಕ್ಷಕರಾಗಿದ್ದರು. ಮೃತರ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಶಾಲೆಗೆ ತರಲಾಯಿತು.

ಜಿ.ಪಂ.ಸದಸ್ಯ ಬಾಬು ಶೆಟ್ಟಿ, ಜಿಲ್ಲಾ ರೈತಸಂಘದ ಅಧ್ಯಕ್ಷ ದೀಪಕ್‌ ಕುಮಾರ ಶೆಟ್ಟಿ, ಉದ್ಯಮಿ ನಾರಾಯಣ ಹೆಗ್ಡೆ, ಮಾಜಿ ತಾ.ಪಂ. ಸದಸ್ಯ ಶಂಕರ ಪೂಜಾರಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಸೇರಿದಂತೆ ಶಾಲಾ ಮಕ್ಕಳು, ಪಾಲಕರು ಅಂತಿಮ ದರ್ಶನ ಪಡೆದರು. ಮƒತರು ಪತ್ನಿ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com