ಸಂಶಯಾಸ್ಪದ ರೀತಿಯಲ್ಲಿ ಕಡವೆ ಸಾವು

ಸಿದ್ದಾಪುರ: ಹೊಸಂಗಡಿ ಗ್ರಾಮ ಪಂಚಾಯತ್‌ ಎದುರಿನ ಖಾಸಗಿ ಜಾಗದಲ್ಲಿ ಕಡವೆವೊಂದು ಗಾಯಗೊಂಡು ಸಂಶಯಾಸ್ಪದ ರೀತಿಯಲ್ಲಿ ಮೃತ ಪಟ್ಟ ಘಟನೆ ಶನಿವಾರ ಸಂಭವಿಸಿದೆ.
       ಗಾಯಗೊಂಡ ಈ ಕಡವೆಯೂ ಕಳೆದ ನಾಲ್ಕು ಐದು ದಿನಗಳಿಂದಲೂ ಈ ಭಾಗದಲ್ಲಿ ಕಿರುಚುತ್ತ ಓಡಾಡುತ್ತಿತ್ತು. ಸ್ಥಳೀಯರು ಈ ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯವರು ಕಳೆದ ಮೂರು ದಿನಗಳ ಹಿಂದೆ ಸ್ಥಳಗಾಗಮಿಸುವಾಗ ಕಡವೆಯು ಅರೆ ಜೀವದಿಂದ ಒದ್ದಾಡುತ್ತಿತು. ಆದರೆ ಅರಣ್ಯ ಇಲಾಖೆಯವರು ಅದಕ್ಕೆ ಚಿಕಿತ್ಸೆ ನೀಡದೇ ಇರುವುದರಿಂದ ಶ‌ನಿವಾರ ಬೆಳಗ್ಗಿನ ಸಮಯದಲ್ಲಿ ಕಡವೆ ಮೃತ ಪಟ್ಟಿದೆ ಎನ್ನುವುದು ಸ್ಥಳೀಯ ಹೇಳಿಕೆಯಾಗಿದೆ.

ಈ ಪ್ರದೇಶವು ಮೇಟ್‌Rಲ್‌ ಗುಡ್ಡx ಅಭಯಾರಣ್ಯ ಪ್ರದೇಶಕ್ಕೆ ತಾಗಿ ಕೊಂಡಿದೆ. ಕಡವೆಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿವೆ. ನಿರೂಪದೃವಿಗಳಾದ ಕಡವೆಗಳನ್ನು ಈ ಭಾಗದಲ್ಲಿ ಮಾಂಸಕ್ಕಾಗಿ ಭೇಟೆಯಾಡುತ್ತಾರೆ. ಇವುಗಳು ಭೇಟೆಗಾರರಿಗೆ ಹೆದರಿ ಆಗೋಮ್ಮೆ ಈಗೊಮ್ಮೆ ಊರಿನತ್ತ ಕಡೆ ಬರುತ್ತವೆ. ಕಡವೆಗೆ ಯಾರೋ ಹೊಡೆದ ಪರಿಣಾಮ ಹಿಂಭಾಗದಲ್ಲಿ ಗಾಯವಾಗಿದೆ. ಇದರ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಗೆ ಸ್ಥಳೀಯರು ದೂರಿದರು ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಹೊಸಂಗಡಿ ಗ್ರಾಮದ ಮಂಡಗದ್ದೆಯಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಕಾಡು ಕೋಣವೊಂದು ಸಂಶಯಾಸ್ಪದ ರೀತಿಯಲ್ಲಿ ಮೃತ ಪಟ್ಟಿತ್ತು. ಈ ಘಟನೆ ಮಾಸುವ ಮೊದಲೇ ಹೊಸಂಗಡಿಯ ಹೃದಯ ಭಾಗದಲ್ಲಿರುವ ಗ್ರಾ. ಪಂ. ಎದುರಿನ ಖಾಸಗಿ ಸ್ಥಳದಲ್ಲಿ ಕಡವೆಯೊಂದು ಮೃತ ಪಟ್ಟಿದೆ. ಇಷ್ಟಾದರೂ ಅರಣ್ಯ ಇಲಾಖೆ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಈ ಘಟನೆಯ ಬಗ್ಗೆ ನಮ್ಮಗೆ ಮಾಹಿತಿ ನೀಡಿದರು. ನಾವು ಇಲಾಖೆಯವತಿಯಿಂದ ಮೂರು ದಿನಗಳ ಹಿಂದೆ ಸ್ಥಳಗಾಗಮಿಸುವಾಗ ಕಡವೆಯು ಗಾಯದಿಂದ ಆ ಕಡೆ ಈ ಕಡೆ ಓಡಾಡುತ್ತಿತ್ತು. ಕಡವೆಯ ಗಾಯ ಗುಣವಾಗಿ ಕಾಡಿಗೆ ಹೋಗಬಹುದೆಂದು ಸುಮ್ಮನಾದೆವು ಎಂದು ವನಪಾಲಕ ರವಿ ಅವರು ಹೇಳಿದರು.

ಘಟನಾ ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ರಮೇಶ್‌, ವನಪಾಲಕ ರವಿ ಹಾಗೂ ಅರಣ್ಯ ಸಿಬ್ಬಂದಿಗಳು ಆಗಮಿಸಿ ಪರಿಶಿಲಿಸಿದರು. ನಂತರ ಸ್ಥಳೀಯರ ಸಹಕಾರದಿಂದ ಸುಟ್ಟು ಹೂಳಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com