ಕುಂದಾಪುರ: ಹೆಸ್ಕಾತ್ತೂರು ನಿವಾಸಿ ಸುಷ್ಮಿತಾ ಜೋಗಿ (16) ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಷ್ಮಿತಾ ಬಾರಕೂರಿನ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆ.2ರಂದು ಬೆಳಗ್ಗೆ 7.45ಕ್ಕೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಾಕೆ ಕಾಲೇಜಿಗೂ ಹೋಗದೇ ಮನೆಗೂ ಬಾರದೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಯಲ್ಲಿಯೂ ವಿಚಾರಿಸಲಾಗಿದ್ದು ಅಲ್ಲಿಯೂ ಪತ್ತೆಯಾಗಿಲ್ಲ ಎಂದು ಆಕೆಯ ತಂದೆ ಗೋಪಾಲ ಜೋಗಿ ಕುಂದಾಪುರ ಠಾಣೆ ದೂರು ನೀಡಿದ್ದಾರೆ.
ನಾಪತ್ತೆಯಾದ ಬಾಲಕಿ 5.2 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಕಪ್ಪು ಪ್ಯಾಂಟ್ ಹಾಗೂ ಬಿಳಿಯಲ್ಲಿ ಕಪ್ಪು ಚುಕ್ಕಿ ಇರುವ ಚೂಡಿದಾರ ಧರಿಸಿದ್ದಾಳೆ.