ಕುಂದಾಪುರ: ಶಿರೂರು ಗ್ರಾಮದ ಕರಿಕಟ್ಟೆ ಆರ್ಮಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಪ್ಪುಂದ ಗ್ರಾಮದ ಗಣಪನನ್ನು ಬೈಂದೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆತನಿಂದ ಮಟ್ಕಾ ಜುಗಾರಿಗೆ ಬಳಿಸಿದ ನಗದು ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.