ಕೊಲ್ಲೂರು: ಕಳೆದ ಒಂದೂವರೆ ವರ್ಷದ ಹಿಂದೆ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಹಾಲ್ಕಲ್ ನಿವಾಸಿ ಸುಜಿತ್ ಜಾನ್ ಎಂಬಾತನನ್ನು ಜು.19ರಂದು ಹಾಲ್ಕಲ್ನಲ್ಲಿ ಬಂಧಿಸಿದ ಕೊಲ್ಲೂರು ಪೊಲೀಸರು ಅತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯವು ಆ.1ರ ತನಕ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅತ್ಯಾಚಾರಕ್ಕೆ ಒಳಗಾದ ಯುವತಿ ಗರ್ಭವತಿಯಾಗಿ ಹುಟ್ಟಿಸಿದ ಮಗು ಹಾಗೂ ಹೆತ್ತವರೊಡನೆ ಬೇರೆ ಕಡೆ ವಾಸವಾಗಿದ್ದರು. ಬೆದರಿಸಿ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಹೇಳಿಕೆ ನೀಡಿರುವ ಆಕೆ ಹಾಲ್ಕಲ್ನಲ್ಲಿರುವ ಮನಗೆ ಹೋಗದಂತೆ ಬೆದರಿಸಿ ನಿರ್ಭಂಧ ಹೇರಿರುವುದಾಗಿ ಆರೋಪಿಸಿದ್ದಾರೆ. ಆಕೆ ನೀಢಿದ ದೂರಿನ್ವಯ ಆರೋಪಿ ಸುಜಿತ್ನನ್ನು ಬಂಧಿಸಲಾಗಿದೆ. ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ನಾಯಕ್, ಎಸ್.ಐ. ದೇವೇಂದ್ರ ಅವರು ಡಿವೈಎಸ್ಪಿ ಯಶೋದಾ ವಂಟಗೋಡಿ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.