ಕುಂದಾಪುರ: ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ನಂತರದ ದಿನಗಳಲ್ಲಿ ಯಾವುದೇ ವೈವಾಹಿಕ ಸಂಬಂಧವನ್ನು ಹೊಂದದೇ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಪತಿ ಹಾಗೂ ಅವರ ಮನೆಯವರ ವಿರುದ್ಧ ವಿರುದ್ಧ ಕಂಬದಕೋಣೆ ಗ್ರಾಮದ ಗುಡ್ಡೆಮನೆಯ ನಿವಾಸಿ ಮಮತಾ ಅವರು ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
ಪತಿ ಸುರೇಶ್ ಹಾಗೂ ಮನೆಯವರಾದ ಶೇಖರ್, ಬಾಬು, ನಾಗರತ್ನ, ಹರೀಶ್ ಸೇರಿಕೊಂಡು 1.5ಲಕ್ಷ ರೂ ನಗದು ಹಾಗೂ 14 ಪವನ್ ಬಂಗಾರ ವರದಕ್ಷಿಣೆಯನ್ನು ಪಡೆದಿದು ಮದುವೆಯಾಗಿದ್ದರು. ಮದುವೆಯ ನಂತರ ಯಾವುದೇ ವೈವಾಹಿಕ ಸಂಬಂಧವನ್ನು ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳದೇ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಪತಿಯ ವಿರುದ್ಧ ಮಮತಾ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.