ಕುಂದಾಪುರ: ಕುಂದಾಪುರದ ಕಡಲಲ್ಲೂ ಮೀನುಗಾರರಿಗೆ ಫ್ರಿಜ್, ಫುಟ್ಬಾಲ್ ಇತ್ಯಾದಿ ಲಭಿಸಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮರವಂತೆ ಪರಿಸರದಲ್ಲಿ 3 ಫ್ರಿಜ್, ಕಂಚಿಗೋಡಿನಲ್ಲಿ ಒಂದು ಫ್ರಿಜ್, ಒಂದು ಫುಟ್ಬಾಲ್, ಗಂಗೊಳ್ಳಿ ಸಮುದ್ರ ತೀರದಲ್ಲಿ 1 ಫ್ರಿಜ್ ಮೀನುಗಾರರಿಗೆ ಲಭಿಸಿದ್ದು, ಮನೆಗೆ ತೆಗೆದುಕೊಂಡು ಹೋಗಿದ್ದರು.
ಕರಾವಳಿ ಕಾವಲು ಪಡೆಯ ಪ್ರಭಾರ ಪೊಲೀಸ್ ಅಧೀಕ್ಷಕ ಎಚ್.ಡಿ. ಮೆಂಡೋನ್ಸ ಅವರ ಸೂಚನೆಯಂತೆ ಗಂಗೊಳ್ಳಿ ಕರಾವಳಿ ಕಾವಲುಪಡೆಯ ಇನ್ಸ್ಪೆಕ್ಟರ್ ತಾರಾನಾಥ್ ನೇತೃತ್ವದಲ್ಲಿ ಪೊಲೀಸರು ಮೀನುಗಾರರಿಂದ ಈ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಮಂಗಳೂರು ಪಣಂಬೂರಿನ ಕೋಸ್ಟ್ಗಾರ್ಡ್ಗೆ ಮಾಹಿತಿ ರವಾನಿಸಿದ್ದಾರೆ.