ಕಳವು ಆರೋಪಿಯ ಬಂಧನ ಸೊತ್ತುಗಳ ವಶ

ಕುಂದಾಪುರ: ತಾಲೂಕಿನ ಇಲ್ಲಿಗೆ ಸಮೀಪದ ತಲ್ಲೂರು ಪೇಟೆಯ ಬಸ್ಸು ನಿಲ್ದಾಣದ ಹಿಂಬದಿಯಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ಕಳವು ಆರೋಪಿಗಳನ್ನು ಕುಂದಾಪುರ ಠಾಣಾ ಕ್ರೈಂ ಉಪ ನಿರೀಕ್ಷಕಿ ರೇವತಿ ಅವರು ಬಂಧಿಸಿದ್ದಾರೆ.

ಬಂಧಿತರನ್ನು ಹಾಲಿ ತಲ್ಲೂರು ಕೋಟೆಬಾಗಿಲಿನ ಮೂಲತಃ ವಂಡ್ಸೆ ಆತ್ರಾಡಿಯ ಬಳಗೇರಿಯ ಕೃಷ್ಣ ಹಾಗೂ ಕಟ್‌ಬೆಲೂ¤ರು ಗ್ರಾಮದ ಮುಳ್ಳುಕುಂಟದ ನಿವಾಸಿ ಶೇಖರ ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿಯ ಮೇರೆಗೆ ತಲ್ಲೂರು ಬಸ್ಸು ನಿಲ್ದಾಣಕ್ಕೆ ಧಾವಿಸಿದ ರೇವತಿ ಹಾಗೂ ಸಿಬ್ಬಂದಿಗಳು ಇವರಿಬ್ಬರನ್ನು ವಿಚಾರಿಸಲು ಹೋದಾಗ ಅವರು ಓಡಿ ಹೋಗಲು ಪ್ರಯತ್ನಿಸಿದ್ದು, ನಂತರ ಅವರನ್ನು ಪರಿಶೀಲಿಸಿದಾಗ ಅವರಲ್ಲಿ ಕೆಲವು ಸೊತ್ತುಗಳು ಪತ್ತೆಯಾಗಿರುತ್ತದೆ.

ಆರೋಪಿ ಕೃಷ್ಣ ಹಿಡಿದುಕೊಂಡ ಪ್ಲಾಸ್ಟಿಕ್‌ನಲ್ಲಿ ಮೊಬೈಲ್‌ ಪೋನ್‌, ಮೊಬೈಲ್‌ ಚಾರ್ಜರ್‌, ಕಪ್ಪು ಪರ್ಸ್‌, ಮೊಬೈಲ್‌ ಬ್ಯಾಟರಿ, ರಶೀದಿಗಳು, 20 ರೂ.ನಗದು, ಚಾರ್ಜರ್‌ ಟಾರ್ಚ್‌ ಹಾಗೂ ಕೊಡೆ ಕಂಡು ಬಂದಿದ್ದು, ಆರೋಪಿ ಶೇಖರನ ಬಳಿ ಸುಟ್ಟ ತಾಮ್ರದ ತಂತಿ ಕಂಡು ಬಂದಿತ್ತು.

ಕಳವು ಮಾಡಿದ ಸೊತ್ತುಗಳು: ಆರೋಪಿಗಳನ್ನು ವಿಚಾರಿಸಿದಾಗ ಆರೋಪಿಗಳ ಬಳಿಯಲ್ಲಿರುವ ಕಳವು ಮಾಡಲ್ಪಟ್ಟವುಗಳು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಆರೋಪಿ ಕೃಷ್ಣ ಜು.19ರಂದು ತಲ್ಲೂರು ಕೋಟೆ ಬಾಗಿಲು ಶಶಿಕಲಾ ಅವರ ಮನೆಯಿಂದ ಈ ವಸ್ತುಗಳನ್ನು ಕಳವು ಮಾಡಿದ್ದರೆ, ಶೇಖರ ಇಡೂರು ಕುಂಜ್ಞಾಡಿ ಬಳಿ ರಾತ್ರಿ ವೇಳೆ ಟೆಲಿಪೋನ್‌ ಕಂಬದಿಂದ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com