ಅಕ್ರಮ ಸಾಗಾಟದ 20 ಕೋಣಗಳು ವಶಕ್ಕೆ: ಇಬ್ಬರ ಬಂಧನ

ಕುಂದಾಪುರ: ಶನಿವಾರ ಬೆಳಗ್ಗಿನ ಜಾವ ಹಟ್ಟಿಯಂಗಡಿ ಕ್ರಾಸ್‌ನಲ್ಲಿ ವಧಿಸಲು ಸಾಗಿಸುತ್ತಿದ್ದ ಕೋಣಗಳನ್ನು ಕುಂದಾಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಂಪಾರು, ಸಿದ್ಧಾಪುರ, ಹಾಲಾಡಿ, ಹಟ್ಟಿಯಂಗಡಿ, ನೇರಳಕಟ್ಟೆ ಪರಿಸರದ ಕೋಣಗಳನ್ನು ಕದ್ದು ಮಾಂಸಕ್ಕಾಗಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಯಶೋಧಾ ಒಂಟಗೋಡಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕವರಿ, ಪಿಎಸ್‌ಐ ಜಯರಾಮ ಡಿ. ಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಲಾರಿ ಸಹಿತ 20 ಕೋಣಗಳನ್ನು ವಶಕ್ಕೆ ತೆಗೆದುಕೊಂಡು, ಕೋಣಗಳ ಸಾಗಾಟ ಮಾಡುತ್ತಿದ್ದ ದಿವಾಕರ್ ಕಾಸರಗೋಡು ಮತ್ತು ಅಬ್ದುಲ್ ಬಶೀರ್ ಕಾಸರಗೋಡು ಎಂಬವರನ್ನು ಬಂಸಿದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com