ಕುಂದಾಪುರ: ಶಂಕರನಾರಾಯಣ ಠಾಣೆಯ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಶೇಡಿಮನೆ ಬೆಪ್ಡೆ ನಿವಾಸಿ ಸುಧೀರ ಪೂಜಾರಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, ಕಳವು ಮಾಡಿದ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಂಕರನಾರಾಯಣ ಸರಹದ್ದಿನಲ್ಲಿ ಕಳವು ಮಾಡಲಾದ ನಾಲ್ಕು ಗ್ರಾಮ ತೂಕದ ಡಿ.ಸಿ.ಚೈನ್ ಹಾಗೂ ಆತನ ಬೈಕ್ನ್ನು ವಶಪಡಿಸಿಕೊಳ್ಳಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.