ಕುಂದಾಪುರ: ಕಳೆದ ಹತ್ತು ವರ್ಷಗಳಿಂದ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾಂಟೀನನ್ನು ನಡೆಸುತ್ತಿದ್ದ ಚೇರ್ಕಾಡಿಯ ನಟರಾಜ್ (23) ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಸ್ಪತ್ರೆ ಕಟ್ಟಡದಲ್ಲಿಯೇ ಕ್ಯಾಂಟೀನೊಂದನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ನಟರಾಜ್ ಮಧ್ಯಾಹ್ನ ರೋಗಿಗಳಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಊಟ ನೀಡಿದ ನಂತರ ನಾಪತ್ತೆಯಾಗಿದ್ದು ಹುಡುಕಾಡಿದಾಗ ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಕೋಣೆಯಲ್ಲಿ ಚೂಡಿದಾರ್ ಶಾಲನ್ನೇ ಬಳಸಿ ಫ್ಯಾನ್ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಮನೆ ಕಟ್ಟಲು ಹಾಗೂ ಸಹೋದರಿಯ ಮದುವೆ ಮಾಡಲು ಮಾಡಿರುವ ಸಾಲದ ಪಾವತಿಯು ಕಷ್ಟ ಸಾಧ್ಯ ವಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಾಗರಾಜ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.